

ಬೆಳಗಾವಿ: ಋತುವಿಗೆ ತಕ್ಕಂತೆ ಆಹಾರ ಸೇವನೆ ಹಾಗೂ ಹಿತ&ಮಿತ ಆಹಾರ ಪದ್ಧತಿಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಬಿಮ್ಸ್ನ ವೈದ್ಯೆ ಡಾ.ಅರ್ಪಿತಾ ವಿ.ಎಸ್ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆಯ ಶಿಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಪ್ರಾಚಾರ್ಯರಾದ ಡಾ.ವಿ.ಪಿ.ಕುರಿ ಮಾತನಾಡಿ, ಯುವ ಜನಾಂಗ ಒತ್ತಡಕ್ಕೆ ಒಳಗಾಗದೆ ಯೋಗ, ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಭುವನೇಶ್ವರಿ ಪಾಟೀಲ, ರಾವೇಂದ್ರ ಪಾಟೀಲ, ಲಕ್ಷಿ$್ಮ ಹಿರೇಮಠ, ಮಹಾದೇವಿ ಬಾಳೇಕುಂದ್ರಿ ಇತರರಿದ್ದರು.