ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಅವಶ್ಯ

COLLEGE
ಬಳ್ಳಾರಿ ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆಯರಿಗೆ ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಪ್ರಾಚಾರ್ಯೆ ಬಿ.ಸುಲೇಖಾ, ಇನ್ನಿತರರಿದ್ದರು.
Published on

ಬಳ್ಳಾರಿ: ಬಾಲಕಿಯರಿಗೆ ನೀಡುವ ಶಿಕ್ಷಣ ರಾಷ್ಟ್ರದ ಭವಿಷ್ಯ ನಿರ್ಮಿಸಬಲ್ಲದು ಎಂದು ಶಾಸಕ ನಾರಾ ಭರತ್ ರೆಡ್ಡಿ ಪ್ರತಿಪಾದಿಸಿದರು.
ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಗುರುವಾರ ಆಯೋಜಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಬಾಲಕಿಯರು ಧೈರ್ಯದಿಂದ ಇರಬೇಕು. ಸಾಧನೆಯ ಹಾದಿಯಲ್ಲಿ ಅವಘಡಗಳು ಸಾಮಾನ್ಯ. ಆದರೆ ಅವುಗಳನ್ನು ಮೀರಿ ನಡೆಯುವ ಸಾಹಸ ನಿಮ್ಮದಾಗಬೇಕು. ಜ್ಞಾನ ಇಂದು ಜಗತ್ತನ್ನು ಆಳುತ್ತಿವೆ. ಕಾಲೇಜಿನ ಕಾಲದಲ್ಲಿ ಸಣ್ಣ ಹುಡುಗಾಟ ಇರಬಹುದು. ಆದರೆ ಅದೇ ಶಿಕ್ಷಣ ಅಲ್ಲ. ಜವಾಬ್ದಾರಿಯನ್ನು ಅರಿತು ನೀವು ಓದಿ, ಉನ್ನತ ಹುದ್ದೆಗಳನ್ನು ಗಳಿಸಬೇಕು. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ವಿಷಯದಲ್ಲಿ ಅಗಾಧ ಸಾಧನೆ ಮಾಡಿ ಐಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್‌ನಂತಹ ಹುದ್ದೆಗಳಿಗೆ ಅರ್ಹರಾಗಲು ತಿಳಿಸಿದರು.

ಕೋರ್ಸ್‌ಗಳು ಲಭ್ಯ

ಸಮಾಜ ದಿನದಿಂದ ದಿನಕ್ಕೆ ವೈವಿಧ್ಯಮಯವಾಗುತ್ತಿದೆ. ಇದಕ್ಕೆ ಪೂರಕವಾದ ಕೋರ್ಸ್‌ಗಳು ಲಭ್ಯವಿವೆ. ಅವುಗಳನ್ನು ಓದಿ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯೆ ಬಿ.ಸುಲೇಖಾ, ಬಾಲಕಿಯರು ಶಿಕ್ಷಣ ಪಡೆದರೆ ನಿಜವಾದ ಅರ್ಥದಲ್ಲಿ ದೇಶದ ಶಕ್ತಿಯೇ ಆಗುತ್ತಾರೆ. ಬಾಲಕಿಯರಿಗೆ ಈ ಹೊತ್ತಲ್ಲಿ ಅನೇಕ ಅವಕಾಶಗಳಿವೆ ಎಂದರು.


ಕಳೆದ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net