ಈದ್ಗಾ ಮೈದಾನದಲ್ಲಿ ಹಾಲುಗಂಬ ಪೂಜೆ

idga pooje
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಶುಕ್ರವಾರ ಹಾಲುಗಂಬ ಪೂಜೆ ನೆರವೇರಿಸಲಾಯಿತು.

ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಾದ ಪೆಂಡಾಲ್ ಹಾಕಲು ಹಾಲುಗಂಬ ಪೂಜೆ ನೆರವೇರಿಸಲಾಗುತ್ತದೆ. ಇಲ್ಲಿ ಸೆ. 7ರಿಂದ 9ರವರೆಗೆ ಗಣೇಶ ಹಬ್ಬ ಆಚರಣೆಗೆ ಮಹಾಮಂಡಳಕ್ಕೆ ಪಾಲಿಕೆ ಅನುಮತಿ ನೀಡಿದೆ.

ಗಣೇಶೋತ್ಸವ ಆಚರಣೆಯ ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಈ ಬಾರಿ ಮುಂಚಿತವಾಗಿ ಅನುಮತಿ ನೀಡಿರುವುದಕ್ಕೆ ಪಾಲಿಕೆ ಆಯುಕ್ತರನ್ನು ಅಭಿನಂದಿಸುತ್ತೇವೆ. ಕಳೆದ ಎರಡು ವರ್ಷ ಸಾಕಷ್ಟು ಜನರು ಗಣೇಶನನ್ನು ವೀಕ್ಷಿಸಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಭಾರತ ದೇಶಾದ್ಯಂತ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ದೇಶವಾಸಿಗಳಿಗೆ ಗಣೇಶ ಶುಭ ತರಲಿ ಎಂದು ಹಾರೈಸುತ್ತೇವೆ ಎಂದರು.

ಶಾಸಕರ ಮಹೇಶ ಟೆಂಗಿನಕಾಯಿ, ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ಸುಭಾಸಸಿಂಗ್ ಜಮಾದಾರ, ಮಹೇಂದ್ರ ಕೌತಾಳ, ರಮೇಶ ಕದಂ, ರಘು ಯಲ್ಲಕ್ಕನವರ, ವಿಜಯ ಕ್ಷೀರಸಾಗರ, ಸುನೀಲ ಕಟ್ಟಿಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net