ಆಹಾರಕ್ಕಾಗಿ ಪಾರಂಪರಿಕ ಕೃಷಿ ಪದ್ಧತಿ ಅನುಸರಿಸಿ

kh haali Agri
ಚಂದ್ರಶೇಖರಪುರ ಗ್ರಾಮದಲ್ಲಿ ಗುಡೇಕೋಟೆ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಪೂಜಾರಿಹಳ್ಳಿ ತಿಪ್ಪೇಸ್ವಾಮಿ ಮಾತನಾಡಿದರು. ಅಧಿಕಾರಿ ಪುಷ್ಪಾ ಆಳ್ನವರ್, ಪತ್ರೆಪ್ಪ, ಸಿದ್ದಪ ಇದ್ದರು.
Published on

ಕಾನಹೊಸಹಳ್ಳಿ: ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ವಾಣಿಜ್ಯ ಬೆಳೆ ಬೆಳೆಯುವಾಗ ಅಧುನಿಕ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಕೃಷಿ ಅಧಿಕಾರಿ ಪುಷ್ಪಾ ಆಳ್ನವರ್ ಹೇಳಿದರು.

ಚಂದ್ರಶೇಖರಪುರ ಗ್ರಾಮದಲ್ಲಿ ಗುಡೇಕೋಟೆ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾರಂಪರಿಕ ಕೃಷಿ ಪದ್ಧತಿಯಿಂದ ಬೆಳೆದ ಬೆಳೆಗಳು ಆಹಾರಕ್ಕೆ ಯೋಗ್ಯ. ಗುಡೇಕೋಟೆ ಹೋಬಳಿಯಲ್ಲಿ ಅತಿಯಾದ ಮಳೆಗೆ ಉರುಳಿ, ಅಲಸಂದಿ, ನವಣೆ ಬೆಳೆ ಜಲಾವೃತವಾಗಿ ಭಾಗಶಃ ನಾಶವಾಗಿದೆ. ಸ್ವಲ್ಪ ಮಟ್ಟಿಗೆ ತೊಗರಿ ಬೆಳೆ ಉತ್ತಮವಾಗಿದ್ದು, ಕೀಟಬಾಧೆ ಕಾಣಿಸಿಕೊಂಡರೆ ಕೃಷಿ ಅಧಿಕಾರಿಗಳ ಸಲಹೆ ಪಡೆದು ಸೂಕ್ತವಾದ ಔಷಧ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ಪ್ರಗತಿಪರ ಕೃಷಿಕ ಪೂಜಾರಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಬೆಳೆಗಳ ಗುಣಮಟ್ಟ ಮತ್ತು ಅಹಾರಕ್ಕೆ ಬಳಸುವ ಧಾನ್ಯಗಳು ಯೋಗ್ಯವಾಗಿರುತ್ತವೆ. ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತವಾಗುತ್ತದೆ ಎಂದರು.

ಪ್ರಮುಖರಾದ ಗೌತಮಕುಮಾರ್, ಶಂಕರ, ವೀರಭದ್ರ, ಸಿದ್ದಪ್ಪ, ಪೂಜಾರಿ ಸಿದ್ದಪ್ಪ, ಪತ್ರೆಪ್ಪ, ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net