

ರಾಮದುರ್ಗ: ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮುಂಬರುವ ವಿಧಾನಸಭೆ ಚುನಾವಣೆ ೂಷಣೆಗೂ ಎರಡು ವರ್ಷ ಮೊದಲೇ ರೆತರ ಜಮೀನುಗಳಿಗೆ ನೀರು ತಲುಪುವಂತೆ ಮಾಡುತ್ತೇನೆ ಎಂದು ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪಂಚಾಯಿತಿ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಗೊಡಚಿ ೇತ್ರವನ್ನು ಅಭಿವದ್ಧಿಪಡಿಸಬೇಕು. ಎಲ್ಲ ಧಮೀರ್ಯರು ಸೇರಿ ಆಚರಿಸುವ ಜಾತ್ರೆ ಉತ್ಸವಗಳು ಎಲ್ಲರನ್ನು ಒಂದುಗೂಡಿಸುತ್ತದೆ. ಜಾತ್ರೆಯಲ್ಲಿ ಹೆಚ್ಚು ಮಾರಾಟವಾಗುವ ಬಳವಲು ಹಾಗೂ ಬೋರೆ ಹಣ್ಣಿನ ಮ ಇನ್ನಷ್ಟು ಹೆಚ್ಚಾಗಲಿ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ರೆತರು ಹಾಗೂ ಜನ ಸಾಮಾನ್ಯರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುವುದು ವಸ್ತು ಪ್ರದರ್ಶನದ ಉದ್ದೇಶವಾಗಿದ್ದು, ರೈತರು ಲಾಭ ಪಡೆದು ಪ್ರಗತಿ ಸಾಧಿಸಬೇಕೆಂದು ಕರೆ ನೀಡಿದರು.
ರಾಮದುರ್ಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮಾತಾ ರಾಜಯೋಗಿನಿ ವೆಶಾಲಿ ಮಾತನಾಡಿದರು. ಕಿಲ್ಲಾತೊರಗಲ್ಲ ಗಚ್ಚಿನ ಹಿರೇಮಠದ ಶ್ರಿಚನ್ನಮಲ್ಲ ಶಿವಾಚಾರ್ಯರು, ಗೊಡಚಿ ಚಂದ್ರಶೇಖರ ಶಿವಾಚಾರ್ಯರು, ಮುಪ್ಪಯ್ಯ ಶಾಸ್ತ್ರೀ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯೆ ಲಕ್ಕವ್ವ ವಗ್ಗರ ಅಧ್ಯತೆ ವಹಿಸಿದ್ದರು. ೇತ್ರದ ಧರ್ಮಾಧಿಕಾರಿ ಶ್ರೀಮಂತ ಸಂಗ್ರಾಮಸಿಂಹ ಶಿಂಧೆ, ಶ್ರೀಮಂತ ಸಂಜಯಸಿಂಹ ಶಿಂಧೆ, ಗ್ರಾಪಂ ಉಪಾಧ್ಯ ಮಾಬುಸುಬಾನಿ ಮುನವಳ್ಳಿ, ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸಂಗೀತಾ ಕುರೇರ, ಸಹಾಯಕ ಕಷಿ ನಿರ್ದೇಶಕ ಎಸ್.ಎ್. ಬೆಳವಟಗಿ, ಪಶು ವೆದ್ಯಾಧಿಕಾರಿ ಡಾ.ಗಿರೀಶ ಪಾಟೀಲ, ಹೆಸ್ಕಾಂ ಉಪವಿಭಾಗದ ಎಇಇ ಶಿವಪ್ರಕಾಶ ಕರಡಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಸಾಮಾಜಿಕ ಅರಣ್ಯ ಅಧಿಕಾರಿ ದಾನಮ್ಮ ಗುಂಜಗಾವಿ, ಕಟಕೋಳ ವೆದ್ಯಾಧಿಕಾರಿ ಎಂ.ಎಸ್. ಶಾಲದಾರ, ಜಿಪಂ ಮಾಜಿ ಸದಸ್ಯ ಜಹೂರ ಹಾಜಿ, ಪಿಡಿಒ ಸಿ.ಕೆ. ಕೊಪ್ಪದ, ಕಾರ್ಯದರ್ಶಿ ವಿ.ಎಂ. ಯಡಹಳ್ಳಿ ಇತರರಿದ್ದರು.