

ಮೈಸೂರು: ರೋಟರಿ ಬಿಜಿನೆಸ್ ಕಾನ್‌ಕ್ಲೇವ್ (ಆರ್‌ಬಿಸಿ) ಮೈಸೂರು ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿ ಹಿರಿಯ ರೊಟೇರಿಯನ್ ಡಾ. ಮುಳ್ಳೂರು ನಂಜುಂಡಸ್ವಾಮಿ ಅಧಿಕಾರ ಸ್ವೀಕರಿಸಿದರು.
ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ -3181ರ ಮಾಜಿ ಜಿಲ್ಲಾ ಪ್ರಾಂತಪಾಲ ಎನ್. ಪ್ರಕಾಶ್ ಕಾರಂತ್ ಅವರು ಆರ್‌ಬಿಸಿ ಲಾಂಛನ, ರೋಟರಿ ಪಿನ್ ಹಾಕುವ ಮೂಲಕ ಪದಗ್ರಹಣ ನೆರವೇರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಮುಳ್ಳೂರು ನಂಜುಂಡಸ್ವಾಮಿ, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರಲ್ಲಿರುವ ಹಲವು ಕ್ಲಬ್ಗಳ ಸದಸ್ಯರನ್ನು ಮಾತ್ರ ಆರ್‌ಬಿಸಿಗೆ ಸೇರಿಸಲಾಗಿದೆ. ಇಲ್ಲಿ ಉದ್ಯಮ, ನಾಯಕತ್ವ ಮತ್ತು ಸೇವೆಗೆ ಒತ್ತು ನೀಡಲಾಗುವುದು ಎಂದರು.
ಸ್ವಾಮಿ ಉಪಾಧ್ಯಕ್ಷ, ಎನ್.ಭರತ್ ಕಾರ್ಯದರ್ಶಿ, ಎನ್.ಆರ್.ಹರೀಶ್ ಸಹ ಕಾರ್ಯದರ್ಶಿ, ಸಂತೋಷ್ ಎಸ್.ಗೌಡ ಖಜಾಂಚಿಯಾದರೆ, ಎಲ್.ಸಿ.ಧರ್ಮಾನಂದ, ಎಸ್. ನಾಗೇಶ್, ಬಿ.ಶೀನಾಥ್, ಎಸ್. ಯದುಕೃಷ್ಣ, ಎಸ್. ಶಿವಕುಮಾರ್‌ಮಂಜುನಾಥ ನಿರ್ದೇಶಕರಾಗಿ ನೇಮಕವಾದರು.
ಮಾಜಿ ಸಹಾಯಕ ಪ್ರಾಂತಪಾಲರು, ವಲಯ ಸೇನಾನಿಗಳು, ವಿವಿಧ ರೋಟರಿ ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಆರ್‌ಬಿಸಿಗೆ ಸೇರ್ಪಡೆಗೊಂಡರು.
ರೋಟರಿ ಮಾಜಿ ಸಹಾಯಕ ಪ್ರಾಂತಪಲರಾದ ಯಶಸ್ವಿ ಸೋಮಶೇಖರ್, ವಾಸುದೇವ್, ನಂಜಯ್ಯ, ಕಾರ್ಯದರ್ಶಿ ಎನ್. ಭರತ್, ವಲಯ ಸೇನಾನಿ ಜಗದೀಶ್, ಬಿ.ಎಸ್.ಅಶ್ವಿನಿ ಮುಳ್ಳೂರು ನಂಜುಂಡಸ್ವಾಮಿ, ವೇಣು ಇತರರು ಇದ್ದರು.