ಸಹಕಾರಿ ನೌಕರರ ಸಂಘ ಅಸ್ಥಿತ್ವಕ್ಕೆ

14 ckm 4
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್.ಎ.ವೆಂಕಟಸುಬ್ಬಯ್ಯ, ಉಪಾಧ್ಯಕ್ಷರಾಗಿ ವಿ.ಮನೋಹರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರನ್ನು ನಿರ್ದೇಶಕರು ಅಭಿನಂದಿಸಿದರು. ರುಕ್ಮಿಣಿ, ಅನಿಲ್‌ಕುಮಾರ್, ಕೆ.ಜಿ.ಅಜಿತ್, ಕೆ.ಡಿ.ಪ್ರಶಾಂತ್, ಎಸ್.ಎಂ.ಬಸವರಾಜ್, ಎಚ್.ಎ.ಗಜೇಂದ್ರ, ಟಿ.ಎಂ.ಮಹಾದೇವಪ್ಪ, ಬಿ.ಎನ್.ಕುಟ್ಟಪ್ಪ, ಎಚ್.ಡಿ.ರಮೇಶ್, ಎಸ್.ನಾಗರಾಜ್ ಡಿ.ಕಾಟೇಗೌಡ, ತ್ರಿವೇಣಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಸಹಕಾರಿ ನೌಕರರ ಸಹಕಾರ ಸಂಘವು ಬುಧವಾರ ಅಸ್ಥಿತ್ವಕ್ಕೆ ಬಂದಿದ್ದು, ನಗರದ ಹೌಸಿಂಗ್ ಬೋರ್ಡ್ನ ಸಹಕಾರಿ ಸೌಧದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಎಲ್.ಎ.ವೆಂಕಟಸುಬ್ಬಯ್ಯ, ಉಪಾಧ್ಯಕ್ಷರಾಗಿ ವಿ.ಮನೋಹರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಅನಿಲ್‌ಕುಮಾರ್, ಕೆ.ಜಿ.ಅಜಿತ್, ಕೆ.ಡಿ.ಪ್ರಶಾಂತ್, ಎಸ್.ಎಂ.ಬಸವರಾಜ್, ಎಚ್.ಎ.ಗಜೇಂದ್ರ, ಟಿ.ಎಂ.ಮಹಾದೇವಪ್ಪ, ಬಿ.ಎನ್.ಕುಟ್ಟಪ್ಪ, ಎಚ್.ಡಿ.ರಮೇಶ್, ಎಸ್.ನಾಗರಾಜ್ ಡಿ.ಕಾಟೇಗೌಡ, ತ್ರಿವೇಣಿ, ಆರ್.ಗಂಗಾಧರ ನಾಯಕ್, ವಿ.ರವಿಚಂದ್ರ, ಮೋಹನ್‌ರಾಜ್ ಮತ್ತು ಪೂರ್ಣಿಮಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರುಕ್ಮಿಣಿ ಘೋಷಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟ ಸುಬ್ಬಯ್ಯ, ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ನೌಕರರ ಶ್ರೇಯೋಭಿವೃಧ್ದಿ ಸಂಘವನ್ನು ಸ್ಥಾಪಿಸಲಾಗಿದೆ. ಸುಮಾರು ೪೦೦ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಹೊಂದಿದ್ದು, ನೌಕರರಿಗೆ ವಾಹನ, ಗೃಹ ಸಾಲಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಳೆದ ಐದಾರು ತಿಂಗಳಿನಿAದ ಸದಸ್ಯರ ಒಡನಾಟದಿಂದ ಸಂಘಕ್ಕೆ ೮ ಲಕ್ಷ ರೂ. ಠೇವಣಿ ಸಂಗ್ರಹಿಸಲಾಗಿದೆ. ನೌಕರರ ಕಲ್ಯಾಣಾಭಿವೃದ್ಧಿಗೆ ಈ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಇಂದು ಅಧಿಕೃತವಾಗಿ ಸಂಘವನ್ನು ಸ್ಥಾಪಿಸಿ ಮುನ್ನೆಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಡಿ.ಪಿ.ಲೋಕೇಗೌಡ, ಧರ್ಮರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net