

ಯಲಬುರ್ಗಾ: ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರಾಜ್ಯದೆಲ್ಲೆಡೆ ಜನ ಜಾಗೃತಿ ಸಮಿತಿಗಳನ್ನೊಳಗೊಂಡು ಸರ್ವರನ್ನು ಸಮನಾಗಿ ಕಾಣುತ್ತಿದೆ ಎಂದು ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಸಮಾಜದಲ್ಲಿ ದುಶ್ಚಟಗಳಿಗೆ ಪ್ರಚೋದನೆ ನೀಡುವ ಜನ ಹೆಚ್ಚಿದ್ದಾರೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮದ್ಯ ವ್ಯಸನಿಗಳನ್ನು ಕುಡಿತದಿಂದ ಪಾರು ಮಾಡುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಂಸ್ಥೆಯ ಜಿಲ್ಲಾ ಜನ ಜಾಗೃತಿ ಸಮಿತಿ ಉಪಾಧ್ಯಕ್ಷ ಸಂಗಣ್ಣ ತೆಂಗಿನಕಾಯಿ, ಸದಸ್ಯರಾದ ಶಕುಂತಲಾ ಪಾಟೀಲ್, ಶರಣಬಸಪ್ಪ ದಾನಕೈ, ವೀರಣ್ಣ ನಿಂಗೋಜಿ, ಮಹಾಂತೇಶ ಗಾಣಿಗೇರ, ಗುರಪ್ಪ ಅಂಗಡಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಯೋಜನಾಧಿಕಾರಿ ಸತೀಶ ಗಾಂವಕಾರ, ಗಣ್ಯರಾದ ಲಲಿತಾ, ಹಂಚ್ಯಾಳಪ್ಪ ಪೂಜಾರ, ಶಿವಪುತ್ರಪ್ಪ ಮಲಿಗೋಡದ, ರಾಯಪ್ಪ ಮಾಡಲಗೇರಿ, ಹನುಮಂತಪ್ಪ ಬೇರಗಿ, ಖಾನ್‌ಸಾಬ್ ಮುಧೋಳ, ಬಸವರಾಜ ಅಂಗಡಿ, ಕಳಕಪ್ಪ ಯಡಿಯಾಪುರ, ಬಸನಗೌಡ ಹಿರೇಗೌಡರ, ವೀರಪ್ಪ ಕುಂಬಾರ ಇತರರಿದ್ದರು.