ಪ್ರತಿಯೊಬ್ಬರಿಗೂ ಸಂಸ್ಕಾರ ಮುಖ್ಯ

10BLH4
Published on

ಬೈಲಹೊಂಗಲ: ಬಂಗಾರಕ್ಕೆ ಸಂಸ್ಕಾರ ನೀಡಿದರೆ ಸುಂದರ ಆಭರಣವಾಗುತ್ತದೆ. ಮಣ್ಣಿಗೆ ಸಂಸ್ಕಾರ ನೀಡಿದರೆ ಸುಂದರ ಗಡಿಗೆಯಾಗುತ್ತದೆ. ಅದೇ ರೀತಿ ಮನುಷ್ಯನಿಗೆ ಸಂಸ್ಕಾರ ಕೊಟ್ಟಲ್ಲಿ ಬದುಕು ಸುಂದರವಾಗುತ್ತದೆ ಎಂದು ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ದೊಡ್ಡವಾಡ ಹಿರೇಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಜನ್ಮ ಸಾರ್ಥಕಪಡಿಸಿಕೊಳ್ಳಲು ಆಧ್ಯಾತ್ಮೀಕತೆ ಹಾಗೂ ಧಾರ್ಮಿಕತೆ ಅಗತ್ಯವಾಗಿದೆ. ಶ್ರೀ ಮಠದಲ್ಲಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ಶಿವಪೂಜಾ ಪದ್ಧತಿ, ವಾಸ್ತು&ಜ್ಯೋತಿಷ್ಯ ಹಾಗೂ ವೇದದ ಪಾಠ&ಪ್ರವಚನ ಎಂದು ತಿಳಿಸಿದರು.

ವಿದ್ವಾನ್​ ಗಂಗಾಧರಯ್ಯಸ್ವಾಮಿ ರಾಯಚೂರು ಮಾತನಾಡಿ, ಪ್ರತಿಯೊಬ್ಬರು ಹೆತ್ತವರು ಹಾಗೂ ಗುರು&ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಮಹಾಂತೇಶ ಹಿರೇಮಠ ಮಾತನಾಡಿದರು. ಶಕ್ತಿಪ್ರಸಾದ ಶಾಸ್ತ್ರೀ, ಶ್ರೀಶೈಲ ಶಾಸ್ತ್ರೀ, ಶಿವಯ್ಯ ಶಾಸ್ತ್ರೀ, ಮಹಾಂತೇಶ ಶಾಸ್ತ್ರೀ, ಮುಖಂಡರಾದ ವೀರಪ್ಪ ಅತ್ತಿಕಟಗಿ, ಬಸಪ್ಪ ಕಡದಳ್ಳಿ, ಶಂಕರ ಚೌಡನ್ನವರ, ಆರ್​.ಎಸ್​.ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net