ಎಲ್ಲರಿಗೂ ಬ್ಯಾಂಕ್ ಸೇವೆ ಸಿಗಲಿ

1
ಚಿಕ್ಕೋಡಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯನ್ನು ಕರ್ನಾಟಕ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಉದ್ಘಾಟಿಸಿದರು. ದೀಪಕಕುಮಾರ ಶ್ರೀವಾತ್ಸವ, ರಾಕೇಶಕುಮಾರ, ಶಿವಾನಂದ ಮಾಳಿ, ಸಂಜಯ ಅಡಕೆ ಇದ್ದರು.
Published on

ಚಿಕ್ಕೋಡಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆ ನೀಡಿ, ಸಾಮಾನ್ಯ ಗ್ರಾಹಕರಿಗೂ ಗೌರವ ನೀಡಿದಾಗ ಮಾತ್ರ ಬ್ಯಾಕ್‌ಗಳು ಬೆಳೆಯಲು ಸಾಧ್ಯ ಎಂದು ಕರ್ನಾಟಕ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.

ಪಟ್ಟಣದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ ಸೋಮವಾರ ಉದ್ಘಾಟಿಸಿ ಮಾತನಾಡಿ, ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಹೈದರಾಬಾದ್ ಜೋನಲ್ ಹೆಡ್ ದೀಪಕಕುಮಾರ ಶ್ರೀವಾತ್ಸವ ಮಾತನಾಡಿ, ಪಂಜಾಬ್ ಬ್ಯಾಂಕ್ ರಾಜ್ಯಾದ್ಯಂತ 422 ಶಾಖೆ ಹೊಂದಿದೆ. ಚಿಕ್ಕೋಡಿ ತಾಲೂಕು ಕಬ್ಬು ಬೆಳೆಯುವ ನಾಡಾಗಿದ್ದು, ಇಲ್ಲಿನ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಖೆ ಪ್ರಾರಂಭಿಸಲಾಗಿದೆ ಎಂದರು.

ಹುಬ್ಬಳ್ಳಿ ವೃತ್ತ ಕಚೇರಿ ಸಹಾಯಕ ಮುಖ್ಯವ್ಯವಸ್ಥಾಪಕ ರಾಕೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ಕಾಂಬಳೆ, ಸಾಬಿರ್ ಜಮಾದಾರ, ಎಚ್.ಎಸ್.ನಸಲಾಪುರೆ, ಸಂಜಯ ಅಡಕೆ, ಅನಿಲ ಮಾನೆ, ಶಿವಾನಂದ ಮಾಳಿ ಶಾಖಾ ವ್ಯವಸ್ಥಾಪಕ ಶಿವಾನಂದ ಮಾಳಿ, ಸೋಮಶೇಖರ ಬಿಲಕುಂಡಿ, ಪ್ರಶಾಂತ ವರದಾಯಿ ಇತರರು ಇದ್ದರು. ನವ್ಯಾ ದಾವಣಗೆರೆ ನಿರೂಪಿಸಿದರು. ಸೋಮಶೇಖರ ಬಿಲಕುಂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net