

ಕುಲಗೋಡ: ಗಣಿತ ಎಂದರೆ ಭಯಪಡುವವರು ಹೆಚ್ಚು, ಇದನ್ನು ಸರಳ, ಸುಲಭ ವಿಷಯವಾಗಿ ಮಕ್ಕಳಿಗೆ ಬೋಧಿಸುವುದೇ ಗಣಿತ ಆಂದೋಲನದ ಉದ್ದೇಶ ಎಂದು ಪಿಡಿಒ ಸದಾಶಿವ ದೇವರ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಕ್ಷರ ಫೌಂಡೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗಣಿತ ಕಲಿತಾ ಆಂದೋಲನ ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರಿಗೂ ಅಂಕಿ-ಅಂಶಗಳ ಮತ್ತು ವ್ಯವಹಾರಿಕ ಗಣಿತ ಅವಶ್ಯವಾಗಿದೆ ಎಂದರು.
ಗ್ರಾಮದ 4 ಶಾಲೆಯ 4, 5, 6ನೇ ತರಗತಿಯ ಮಕ್ಕಳಿಗೆ ಗಣಿತ ಸ್ಪರ್ಧೆ ಏರ್ಪಡಿಸಲಾಗಿತ್ತು. 160 ಮಕ್ಕಳು ಭಾಗಿಯಾಗಿದ್ದರು. ತಾಪಂ ಮಾಜಿ ಸದಸ್ಯ ಸುಭಾಷ ವಂಟಗೋಡಿ, ಪ್ರಶಾಂತ ವಂಟಗೋಡಿ, ದತ್ತು ಕುಲಕರ್ಣಿ, ಲಕ್ಷ್ಮಣ ಬಡಕಲ್ಲ್ಲ, ಶಂಕರ ಹಾದಿಮನಿ, ಮಲ್ಲಿಕಾರ್ಜುನ ತಿಪ್ಪಿಮನಿ, ಶಿವಪುತ್ರ ಲಕ್ಷ್ಮೇಶ್ವರ ಇತರರು ಇದ್ದರು.