ಶತ್ರು ರಾಷ್ಟ್ರಗಳಿಗೆ ಮೋದಿ ಸಿಂಹಸ್ವಪ್ನ

17blh4 modi bd v i patil team
Published on

ಬೈಲಹೊಂಗಲ: ದೇಶದ ಪ್ರಜೆಗಳ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಶತ್ರುರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ 75ನೇ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಮಾತನಾಡಿದರು.

ಜನ ಕಲ್ಯಾಣ ಯೋಜನೆ ಮೂಲಕ ಅಭಿವೃದ್ಧಿ ಪರ್ವ ಕೈಗೊಂಡ ಮೋದಿಜಿ ರಾಷ್ಟ್ರದ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ದಕ್ಷ ಆಡಳಿತ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಣ ತೋಡೋಣ ಎಂದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಗುರುಪಾದ ಕಳ್ಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶಾಲ ಬೋಗುರ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಅಶೋಕ ಗುಂಡ್ಲ್ಲೂರ, ವಿಜಯ ಪತ್ತಾರ, ಶ್ರೀಕಾಂತ ಶಿರಹಟ್ಟಿ, ಶಿವಪ್ರಸಾದ ಪಾಟೀಲ, ಬಸವರಾಜ ನೇಸರಗಿ, ಸುನೀಲ ಈಟಿ, ರಾಜು ದಳವಾಯಿ, ಶಿವಾನಂದ ಶಿರಸಂಗಿ, ಬಸಲಿಂಗಪ್ಪ ಹಣಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net