ನೌಕರರ ಸಂಘಕ್ಕೆ ಪವಾಡಿಗೌಡ್ರ ಅಧ್ಯಕ್ಷ

16RAM2
ರಾಜ್ಯ ಸರ್ಕಾರಿ ನೌಕರರ ಸಂಘದ ರಾಮದುರ್ಗ ತಾಲೂಕಾಧ್ಯಕ್ಷರಾಗಿ ಈರನಗೌಡ ಪವಾಡಿಗೌಡ್ರ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಭ್ರಮಿಸಿದರು. ಎಂ.ಎಸ್. ಜಂಗವಾಡ, ಮಂಜುನಾಥ ಪರಪ್ಪನವರ, ಪ್ರೊ.ಬಿ.ಬಿ. ಹರನಟ್ಟಿ ಇದ್ದರು.
Published on

ರಾಮದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಈರನಗೌಡ ಪವಾಡಿಗೌಡ್ರ ಆಯ್ಕೆಯಾಗಿದ್ದಾರೆ.

ಒಟ್ಟು 33 ನಿರ್ದೇಶಕರನ್ನೊಳಗೊಂಡ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಈರನಗೌಡ ಪವಾಡಿಗೌಡ್ರ ಹಾಗೂ ರಮೇಶ ಅಣ್ಣಿಗೇರಿ ಸ್ಪರ್ಧಿಸಿದ್ದರು. ಈರನಗೌಡ ಪವಾಡಿಗೌಡ್ರ 31 ಮತ ಪಡೆದು ಬಹುಮತದಿಂದ ಆಯ್ಕೆಯಾದರು. ಪ್ರತಿಸ್ಪರ್ಧಿ ರಮೇಶ ಅಣ್ಣಿಗೇರಿ 2 ಮತ ಪಡೆದು ಸೋಲುಂಡರು.ಕಾರ್ಯದರ್ಶಿಯಾಗಿ ಎಂ.ಎಸ್. ಜಂಗವಾಡ, ರಾಜ್ಯ ಪರಿಷತ್ ಸದಸ್ಯರಾಗಿ ಮಂಜುನಾಥ ಪರಪ್ಪನವರ, ಖಜಾಂಚಿಯಾಗಿ ಪ್ರೊ.ಬಿ.ಬಿ. ಹರನಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಬುಸಲೀಂ ತಹಶೀಲ್ದಾರ್ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net