

ಸವದತ್ತಿ: ಸರ್ಕಾರಿ ನೌಕರರ ಸಂಕ್ಕೆ ಆಯ್ಕೆಯಾದ ನಿರ್ದೇಶಕರು ನೌಕರರ ಮತ್ತು ಶಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಇಲ್ಲಿನ ಪದಕಿಪುರಂದಲ್ಲಿರುವ ಶಾಸಕರ ಗಹಕಚೇರಿಯಲ್ಲಿ ಸೋಮವಾರ ಸರ್ಕಾರಿ ನೌಕರರ ಸಂದ ನಿರ್ದೇಶಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ತಮ್ಮೆಲ್ಲರಿಗೂ ಗೆಲುವು ತಂದುಕೊಟ್ಟ ನೌಕರರಿಗೆ ನ್ಯಾಯ ಒದಗಿಸುವ ಕಾರ್ಯಮಾಡಬೇಕು. ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿಮ್ಮ ಜತೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕಾಧ್ಯರಾಗಿ ಅಶೋಕ ಮುರಗೋಡ, ರಾಜ್ಯ ಪರಿಷತ್ ಸದಸ್ಯರಾಗಿ ನಾಗರಾಜ ಹಂಪಣ್ಣವರ ಹಾಗೂ ಖಜಾಂಚಿಯಾಗಿ ಎಸ್.ಎಂ.ಮುದಗಲ್ ಅವರನ್ನು ಶಾಸಕ ವಿಶ್ವಾಸ ವೆದ್ಯ ನೇತತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖಂಡರಾದ ಪ್ರಭು ಪ್ರಭುನವರ, ಚಂದ್ರಶೇಖರ ಜಂಬ್ರಿ, ಎಂ.ಸಿ.ಕಂಬಿ, ಚತ್ರೇಶ ದಾಸರ, ಬಸವರಾಜ ಅರಮನಿ, ವೀರೇಶ ಬ್ಯಾಹಟ್ಟಿ, ಮಲ್ಲು ಜಕಾತಿ, ಪ್ರವಿಣ ರಾಮಪ್ಪನವರ, ರಾಜಶೇಖರ ಕೌಜಲಗಿ, ಆರ್.ಕೆ. ಪಾಚಂಗಿ ಇತರರು ಇದ್ದರು.