

ಮುರಗೋಡ: ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರಿಂದ ಉದಯೋನ್ಮುಖ ಕಲಿಕೆಗೆ ಪೂರಕವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಸಿ.ಬಿ.ಜಕ್ಕನ್ನವರ ಹೇಳಿದರು.
ಸಮೀಪದ ಹಾರುಗೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನೆರವೇರಿಸಿ ಮಾತನಾಡಿದರು. ಗ್ರಾಪಂ ಸದಸ್ಯ ಬಸನಗೌಡ ಪಾಟೀಲ ವಿದ್ಯಾರ್ಥಿಗಳ ನೃತ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಜಕ್ಕಾನಟ್ಟಿ, ಚಂದ್ರಪ್ಪ ಸೂರಪ್ಪನವರ, ಸಿದ್ದಪ್ಪ ಕುಲಗೋಡ, ವಿಠ್ಠಲ ಕಾಗಿ, ಬಿ.ಎಂ.ಕರಜಗಿ, ಚಿದಾನಂದ ಪೂಜೇರಿ, ರವಿ ದೇಸಾಯಿ, ಮುಖ್ಯಶಿಕ್ಷಕ ಯು. ವಿ. ಕುರಕುರಿ, ಮಲ್ಲಿಕಾರ್ಜುನ ತಳವಾರ, ಈರಣ್ಣ ಆಲದ ಗಿಡದ, ರಾಚಯ್ಯ ಕಲ್ಲಯ್ಯನವರ, ಈರಣ್ಣ ದೊಡ್ಡಹೊನ್ನಪ್ಪನವರ, ನಿಂಗಪ್ಪ ಕುಟಟಮಾಯನ್ನವರ, ಭರತೇಶ ಲಗಮನ್ನವರ, ಎಸ್.ವಿ ರಾಯನಾಯ್ಕರ ಇತರರು ಇದ್ದರು.