ಶೈಕ್ಷಣಿಕ ಅಭಿವೃದ್ಧಿಗೆ ಸೌಲಭ್ಯ ಕಲ್ಪಿಸಲು ಒತ್ತು

11RAM1
Published on

ರಾಮದುರ್ಗ: ಕ್ಷೇತ್ರದ ವಿದ್ಯಾರ್ಥಿಗಳ ಶೈಣಿಕ ಪ್ರಗತಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಬದ್ಧ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಖಾನಪೇಠ ಹಾಗೂ ಕಿತ್ತೂರ ಗ್ರಾಮದಲ್ಲಿ ಉನ್ನತಿಕರಿಸಿದ ಪ್ರೌಢಶಾಲೆಗಳಲ್ಲಿ ಕೇಂದ್ರ ಯೋಜನಾ ಅನುಮೋದನಾ ಮಂಡಳಿ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ತಲಾ 1.35 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಿತ್ತೂರ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಗುರುನಾಥಗೌಡ ಮಾದಾಪುರ ಅವರು ಒಂದೂವರೆ ಎಕರೆ ಭೂಮಿ ನೀಡಿ ಮಾದರಿಯಾಗಿದ್ದಾರೆ ಎಂದರು.

ಬಳಿಕ ಉಡಚಮ್ಮ ನಗರದಲ್ಲಿ 15 ಲ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಕಲಹಾಳ ಗ್ರಾಮದಲ್ಲಿ 15 ಲ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಬಿಇಒ ಆರ್​.ಟಿ.ಬಳಿಗಾರ ಮಾತನಾಡಿದರು. ಹರ್ಲಾಪುರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ರೋಣ ಬೂದೀಶ್ವರಮಠದ ಡಾ.ವಿಶ್ವನಾಥ ಬೂದಿ ಸ್ವಾಮೀಜಿ ಆಶೀರ್ವಚನ ನೀಡಿದರು. ಭೂದಾನಿ ಗುರುನಾಥಗೌಡ ಮಾದಾಪುರ ಸೇರಿ ಗಣ್ಯರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯೆ ಸಿದ್ದವ್ವ ಒಂಟಿ, ಪದ್ಮವ್ವ ಬಡಕಲಿ, ಸದಸ್ಯೆ ರುಕ್ಮವ್ವ ನಾವಿ, ಜಿಪಂ ಮಾಜಿ ಉಪಾಧ್ಯ ಪರಪ್ಪ ಜಂಗವಾಡ, ಸದಸ್ಯ ಜಹೂರ ಹಾಜಿ, ಪಂಚು ಹಲ್ಯಾಳ, ಹೊನ್ನಪ್ಪ ಕಟ್ಟಿಮನಿ, ಮಾರುತಿ ಬಸಿಡೋಣಿ, ಎಸ್ಡಿಎಂಸಿ ಅಧ್ಯೆ ಶಿವಲೀಲಾ ಯರಗಟ್ಟಿ, ಮುಖಂಡ ಹೇಮಣ್ಣ ಚವರಡ್ಡಿ, ಪಿಕೆಪಿಎಸ್​ ಉಪಾಧ್ಯ ಗಿರಿಯಪ್ಪ ಹಣಸಿ, ಮಲ್ಲಪ್ಪ ಸೋಮಗೊಂಡ, ಗೋವಿಂದರಡ್ಡಿ ಪೆಟ್ಲೂರ, ಬಸಲಿಂಗಪ್ಪ ಹರಗುಟಗಿ, ಪಿಡಬ್ಲೂಡಿ ಎಇಇ ರವಿಕುಮಾರ, ಸಿಡಿಪಿಒ ಶಂಕರ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net