ದಸಾರಕ್ಕೆ ಬಾನು ಮುಷ್ತಾಕ್, ಆಕ್ರೋಶ

manvi protst
ಮಾನ್ವಿ ತಹಸಿಲ್ ಕಚೇರಿಯಲ್ಲಿ ಬುಧವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಯುವಾ ಬ್ರಿಗೇಡ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಸಂಚಾಲಕ ಬಸವರಾಜ ಬೊಮ್ಮನಾಳ, ಶ್ರುತಿ, ಗುರುಬಸವ ಬೊಮ್ಮನಾಳ್, ಭೀಮಣ್ಣ, ನಾಗೇಂದ್ರ ಇತರರಿದ್ದರು.
Published on

ಮಾನ್ವಿ: ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಖಂಡಿಸಿ ಯುವಾ ಬ್ರಿಗೇಡ್ ತಾಲೂಕು ಸಮಿತಿ ಬುಧವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಸಂಚಾಲಕ ಬಸವರಾಜ ಬೊಮ್ಮನಾಳ ಮಾತನಾಡಿ, ಮೈಸೂರು ದಸರಾ ರಾಜ್ಯದ ಕೋಟ್ಯಂತರ ಹಿಂದುಗಳ ಧಾರ್ಮಿಕ, ಪರಂಪರೆ, ಇತಿಹಾಸ, ನಂಬಿಕೆಯ ಪ್ರತೀಕವಾಗಿದೆ. ಆದರೆ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಹಿಂದು ಧರ್ಮದ ಕುರಿತು ಒಳ್ಳೆಯ ಅಭಿಪ್ರಾಯ ಇಲ್ಲದ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಲೇಖಕಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದು ಖಂಡನೀಯ.

ಸರ್ಕಾರದ ನಡೆ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಬಾನು ಮುಷ್ತಾಕ್ ಅವರಿಗೆ ನೀಡಿರುವ ಅಹ್ವಾನ ಹಿಂಪಡೆಯಬೇಕು. ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಯುವಾ ಬ್ರಿಗೇಡ್ ತಾಲೂಕು ಸಮಿತಿ ಪದಾಧಿಕಾರಿಗಳಾದ ಶ್ರುತಿ, ಗುರುಬಸವ ಬೊಮ್ಮನಾಳ್, ಭೀಮಣ್ಣ, ನಾಗೇಂದ್ರ, ನರಸಪ್ಪ, ತಿಮ್ಮಪ್ಪ, ಚಂದ್ರು, ಮಂಜುನಾಥ, ಮಹಾದೇವ ಬೊಮ್ಮನಾಳ, ಸಿದ್ದಲಿಂಗಪ್ಪ ಹುಡೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net