

ಖಾನಾಪುರ: ತಾಲೂಕು ಬ್ಲಾಕ್ ಕಾಂಗ್ರೆಸ್ ಪದ ವತಿಯಿಂದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ಅವರ ಜನ್ಮದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದ ಶಿವಸ್ಮಾರಕ ಚೌಕದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಜನರಲ್ಲಿ ಸಾರಿಗೆ ನಿಯಮ ಹಾಗೂ ಸುರಕ್ಷತೆಯ ಅರಿವು ಮೂಡಿಸಲು ನೂರಾರು ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯ ಈಶ್ವರ್ ಘಾಡಿ ಮಾತನಾಡಿ, ಡಾ.ಅಂಜಲಿ ನಿಂಬಾಳ್ಕರ್ ಅವರು 2018 ರಿಂದ 2023 ರವರೆಗೆ ತಾಲೂಕಿನ ಶಾಸಕಿಯಾಗಿ ತಾಲೂಕಿನ ಸಮಗ್ರ ಅಭಿವದ್ಧಿಗೆ ನೀರೆರೆದು ಸಾರ್ವಜನಿಕರ ಮನದಲ್ಲಿ ಛಾಪು ಮೂಡಿಸಿದ್ದಾರೆ ಎಂದರು.
ಪ್ರಸ್ತುತ, ಅವರು ಗೋವಾ ಮತ್ತು ದಿಯು&ದಮನ್ನ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ತಾಲೂಕಿನಿಂದ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಅವರು ಇಂದು ಕಾಂಗ್ರೆಸ್ ಪದ ರಾಷ್ಟ್ರಮಟ್ಟದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಂಟನೆ ಹಾಗೂ ನಾಯಕತ್ವ ಗುಣಗಳಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯ ಮಲ್ಲಿಕಾರ್ಜುನ ರ್ಖಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯ ಮಹಾಂತೇಶ ರಾವುತ್, ಅಲ್ಪಸಂಖ್ಯಾತ ಟಕದ ಅಧ್ಯಕ್ಷ ತೋಹಿತ್ ಚಂದಕ್ನವರ ಸುರೇಶ ಜಾಧವ, ಸೂರ್ಯಕಾಂತ ಕುಲಕರ್ಣಿ, ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ, ಲಿಂಗನಮಠ ಗ್ರಾ.ಪಂ. ಅಧ್ಯ ಕಾಸೀಂ ಹಟ್ಟಿಹೊಳಿ, ಕಾಂಗ್ರೆಸ್ ಮಹಿಳಾ ಟಕದ ಅಧ್ಯೆ ಸಾವಿತ್ರಿ ಮಾದರ, ದೀಪಾ ಪಾಟೀಲ, ಮಧು ಕಾವ್ಲೇಕರ್, ದೀಪಕ ಕವಠಂಕರ, ಭರತೇಶ ತೊರೋಜಿ ಇತರರಿದ್ದರು.