ಅಭಿವೃದ್ಧಿಗೆ ಸ್ಪಂದಿಸುತ್ತಿದೆ ಸಿದ್ದರಾಮಯ್ಯ ಸರ್ಕಾರ

3..5
ಅವರಕೋಡ ಗ್ರಾಮದಲ್ಲಿ ಕೃಷ್ಣಾ ಸಹಕಾರಿ ಕಾರ್ಖಾನೆಯಿಂದ ದೊಡವಾಡ ತಲುಪುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕ ಲಕ್ಷ್ಮಣ ಸವದಿ, ದಶರಥ ಅಂಬಿ, ಅಶೋಕ ಲಡಗಿ, ಮಲ್ಲಪ್ಪ ದರೂರ ಇತರರಿದ್ದರು.
Published on

ಅಥಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ಚದ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡುವ ಜತಗೆ ಕ್ಷೇತ್ರದ ಅಭಿವೃದ್ಧಿಗೂ ಸ್ಪಂದಿಸುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಅವರಕೋಡ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 2021-22ನೇ ಸಾಲಿನ ಯೋಜನೆಯಡಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ದೊಡವಾಡವರೆಗಿನ 3.5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಅವರಖೋಡ, ನಾಗನೂರ ಪಿಕೆ, ಲಕ್ಷ್ಮೀ ದೇವಸ್ಥ್ಥಾನದ ಮೂಲಕ ದೊಡವಾಡ ತಲುಪಲು ಈ ರಸ್ತೆ ಸಹಾಯಕವಾಗಲಿದೆ. ರೈತರು ಬೆಳೆದ ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ ಕಾರ್ಖಾನೆ ಅಥವಾ ಮಾರುಕಟ್ಟೆಗಳಿಗೆ ಸಾಗಿಸಲು ಸಹಕಾರಿಯಾಗಲಿದೆ ಎಂದರು.

ದಶರಥ ಅಂಬಿ, ಅಶೋಕ ಲಡಗಿ, ಮಲ್ಲಪ್ಪ ದರೂರ, ಪಾಂಡು ನಿಕ್ಕಂ, ಮಹಾದೇವ ಬಿಳಿಕುರಿ, ಶ್ರೀಕಾಂತ ದರೂರ, ಪ್ರಶಾಂತ ಅಕೋಳ, ಎಸ್.ಆರ್.ಗೂಳಪ್ಪನವರ, ವಿನಾಯಕ ಬಾಗಡಿ, ಮಲ್ಲು ಕುಳೋಳ್ಳಿ, ಇಂಜಿನಿಯರ ವಿ.ಎ.ವಾಲಿ, ಗುತ್ತಿಗೆದಾರ ಎಸ್.ಎಸ್.ಮದಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net