

ರಾಮದುರ್ಗ: ರಾಜ್ಯ ಸರ್ಕಾರದಿಂದ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ, ಅಭಿವೃದ್ಧಿಗೆ ಶ್ರಮಿಸುತ್ತೇನೆ. ಆದ್ದರಿಂದ ಜನರು ಸಹಕಾರ ನೀಡಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ರೈನಾಪುರವರೆಗೆ, ಕಟಕೋಳ ಗ್ರಾಮದಲ್ಲಿ 7.35 ಕೋಟಿ ರೂ. ವೆಚ್ಚದಲ್ಲಿ ಕೆ.ಚಂದರಗಿವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಸುಧಾರಣೆ ಕಾಮಗಾರಿ ಹಾಗೂ 1.40 ಕೋಟಿ ರೂ. ವೆಚ್ಚದಲ್ಲಿ ಚಿಕ್ಕೊಪ್ಪ ಕೆ.ಎಸ್. ಗ್ರಾಮದಿಂದ ಹೊಸಳ್ಳಿವರೆಗೆ ಆರ್‌ಡಿಪಿಆರ್ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸರ್ವರಿಗೂ ಸಮಬಾಳು ಎನ್ನುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸಾಕಷ್ಟು ಪ್ರಗತಿಪರ ಕೆಲಸ ಮಾಡಿದೆ. ತಾಲೂಕಿನಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಮುಖಂಡರಾದ ಸಿದ್ಧಲಿಂಗಪ್ಪ ಸಿಂಗಾರಗೊಪ್ಪ, ತೋರಣಗಟ್ಟಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುದಗೊಂಡ, ಉಪಾಧ್ಯಕ್ಷ ವಿಠ್ಠಲ ಜೋಗಿ, ಪಿಕೆಪಿಎಸ್ ಅಧ್ಯಕ್ಷ ತಮ್ಮೇಶ ಐನಾಪುರ, ಉಪಾಧ್ಯಕ್ಷ ಮುತ್ತನಗೌಡ ಪಾಟೀಲ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಐನಾಪುರ, ಆರ್.ಜಿ.ಸಿಂಗಾರಗೊಪ್ಪ, ನೀಲಪ್ಪ ಕಂಬಳಿ,
ರಾಮಣ್ಣ ಮೆಟಗುಡ್ಡ, ಶಿವಪ್ಪ ಮುನ್ನೋಳಿ, ಕಟಕೋಳ ಗ್ರಾಪಂ ಅಧ್ಯಕ್ಷೆ ಪಾರ್ವತಿ ಪಾಟೋಳಿ, ಬಾಪು ದೇಸಾಯಿ, ಎನ್.ಬಿ.ದಂಡಿನದುರ್ಗಿ, ಅಮಿತ ದೇಸಾಯಿ, ರಮೇಶ ಕಾಡೇಶನವರ, ಬಸವರಾಜ ಹಲಗತ್ತಿ, ಅಜ್ಜಪ್ಪ ಪಾಣಿ, ಸಿದ್ರಾಯ ಹೊಸಮನಿ, ಅವಿನಾಶ ನಲವಡೆ, ಪಾಂಡು ಕಳಸಪ್ಪನವರ, ಯಂಕಪ್ಪ ಹುರಕನ್ನವರ ಇತರರಿದ್ದರು.