

ನಾಗರಮುನ್ನೊಳಿ: ಮತಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದ್ದಾರೆ.
ಶನಿವಾರ ಮುಗಳಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯಿಂದ 2.15 ಕೋಟಿ ಅನುದಾನದಲ್ಲಿ ವಿವಿಧ ಗ್ರಾಮಗಳ ಅತಿವೃಷ್ಟಿಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 13 ಅಂಗನವಾಡಿ ಕಟ್ಟಡ ಕಾಮಗಾರಿಗೆ ತಲಾ 17 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮುಂದಿನ ವಾರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬಸು ಮಾಳಗಿ, ರಮೇಶ ಕಾಳಣ್ಣವರ, ವಿರೂಪಾಕ್ಷಿ ಕೊಟಬಾಗಿ, ರಾಜು ಹರಗಣ್ಣವರ, ರವಿ ಹಿರೇಕೋಡಿ, ಪಿ.ಬಿ.ಬೇಡಿಕ್ಯಾಳೆ, ಐ.ಆರ್.ಕಾಕೋಳ, ಸಂತ್ರಾಂ ಕುಡರುಕ, ಕಲ್ಮೇಶ ರಾಚ್ಚಣ್ಣವರ, ಕಮೇಶ ಇದ್ದರು.