ಅಭಿವೃದ್ಧಿಗಾಗಿ ಭಾಜಪಕ್ಕೆ ಮತ ನೀಡಿ

For development for BJP vote give Manjari Belgaum
ಮಾಂಜರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತಯಾಚಿಸಿದರು. ಸಂಜಯ ಚೌರಾಶಿಯಾ, ಅಣ್ಣಾಸಾಹೇಬ ಯಾದವ, ಭರತೇಶ ಬನಾವಣೆ ಇತರರಿದ್ದರು.
Published on

ಮಾಂಜರಿ: ರೈತರ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕಾರ್ಖಾನೆ ಜತೆಗೆ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ತಾಲೂಕಿನ ಮಾಂಜರಿ, ಯಡೂರ, ಚಂಡೂರು ಹಾಗೂ ಇಂಗಳಿ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರ ಪ್ರಚಾರ ಕೈಗೊಂಡು ಮಾತನಾಡಿದ, ಅವರು, ವ್ಯಕ್ತಿ ಬೆಳೆಯುವುದು ಧರ್ಮ, ಜಾತಿಯಿಂದಲ್ಲ, ಉತ್ತಮ ಗುಣಗಳಿಂದ. ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ನೀರಾವರಿ ಯೋಜನೆ ಮತ್ತು ಸಾವಿರ ಕೋಟಿ ರೂ.ಗಳ ಬೃಹತ್ ನಿಧಿ ಒದಗಿಸುವ ಜತೆಗೆ ಸ್ವ-ಸಹಾಯ ಸಂಘಗಳು, ಮಹಿಳಾ ಸಂಘಟನೆ, ಶಿಕ್ಷಣ, ಆರೋಗ್ಯ, ಜಲ-ಸಂರಕ್ಷಣೆ, ಉದ್ಯೋಗ ಸೇರಿ ಹಲವು ಸಮಾಜಮುಖಿ ಯೋಜನೆ ಜಾರಿಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಯುವಕರಿಗೆ, ಸ್ಮಾರ್ಟ್ ವಿಲೇಜ್, ಜಲಜೀವನ ಯೋಜನೆ, ಹೆದ್ದಾರಿ, ಸ್ಮಾರ್ಟ್ ಸಿಟಿಯಂತಹ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ ಕತ್ತಿ ಅವರನ್ನು ಗೆಲ್ಲಿಸಬೇಕು ಎಂದರು.

ಬಿಹಾರದ ಪಾಟ್ನಾ ಶಾಸಕ ಸಂಜಯ ಚೌರಾಶಿಯಾ, ಅಣ್ಣಾಸಾಹೇಬ ಯಾದವ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ಅಜಿತರಾವ್ ದೇಸಾಯಿ, ದತ್ತ ಯಾದವ, ಪಿಂಟು ಹಿರೇಕುರುಬರ, ತುಕಾರಾಮ ಪಾಟೀಲ, ಬಸವರಾಜ ಕೋರೆ, ರಾಹುಲ ದೇಸಾಯಿ, ವಿಕ್ರಾಂತ ದೇಸಾಯಿ, ಶಂಕರ ಕೋರೆ, ಮೋಹನ ಲೋಕರೆ, ಶ್ರೀಧರ ಭೋಜಕರ, ಸನತ್ ಪಾಟೀಲ್, ದಾದಾಸಾಹೇಬ್ ಭೋಜಕರ್, ಪ್ರಶಾಂತ ಲಂಬಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net