ಅಭಿವೃದ್ಧಿಗೆ ಡಾ. ಪ್ರಭಾಕರ ಕೋರೆ ನೆರವು- ಮಹಾಂತೇಶ ಕವಟಗಿಮಠ

Prabhakar-Kore
Published on

ಚಿಕ್ಕೋಡಿ: ಡಾ.ಪ್ರಭಾಕರ ಕೋರೆ ಅವರು ರಾಜ್ಯಸಭೆ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ವರ್ಷಗಳಲ್ಲಿ 3 ಕೋಟಿ ರೂ.ಅನುದಾನ ಮಂಜೂರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಅಂಕಲಿ ಗ್ರಾಮದ ಕೃಷ್ಣಾ ನಗರದಲ್ಲಿ ಶನಿವಾರ ಡಾ.ಪ್ರಭಾಕರ ಕೋರೆ ಅವರ ಹುಟ್ಟುಹಬ್ಬದ ನಿಮಿತ್ತ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಿರುವ 14 ಲಕ್ಷ ರೂ. ವೆಚ್ಚದ ಅಕ್ವಾಗೋಲ್ಡ್ ಜಲಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಕಲಿ ಗ್ರಾಮದ ಹನುಮಾನ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ
17 ಲಕ್ಷ ರೂ., ಅಂಕಲಿಯ ಪೊಲೀಸ್ ಕ್ವಾರ್ಟರ್ಸ್‌ನಿಂದ ಮುಖ್ಯ ರಸ್ತೆಯವರೆಗಿನ ಸಿಸಿ ರಸ್ತೆ ನಿರ್ಮಾಣಕ್ಕೆ 4.7 ಲಕ್ಷ ರೂ., ಅಂಕಲಿಯ ಓಂ ಶಾಂತಿ ಬ್ರಹ್ಮಾಕುಮಾರಿ ಸಮುದಾಯ ಭವನಕ್ಕೆ 5 ಲಕ್ಷ ರೂ., ನೀರಾವರಿ ನಿಗಮದಿಂದ ಕಿಳ್ಳಿಕೇತ, ಲಕ್ಷ್ಮೀ ನಗರ ಮತ್ತು ಶಿವಾಲಯದಿಂದ ರಾಯಬಾಗ ರಸ್ತೆವರೆಗಿನ ಡಾಂಬರೀಕರಣಕ್ಕೆ 50 ಲಕ್ಷ ರೂ.ಅನುದಾನ ಮಂಜೂರು ಮಾಡುವ ಮೂಲಕ ಅಂಕಲಿ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.

ಸಿ.ಬಿ. ಕೋರೆ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಬನವಣೆ, ಮಲ್ಲಿಕಾರ್ಜು ಕೋರೆ, ಅಜಿತ ದೇಸಾಯಿ, ಸುರೇಶ ಪಾಟೀಲ, ತುಕಾರಾಮ ಪಾಟೀಲ, ಪಿಂಟು ಹಿರೇಕುರುಬರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net