ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ

5CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರ ಪ್ರಯತ್ನದಿಂದ ಯಕ್ಸಂಬಾ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ 2.5 ಕೋಟಿ ರೂ. ಅಲ್ಲದೇ ರಸ್ತೆ ನಿರ್ಮಾಣ, ಪೇವರ್ ಬ್ಲಾಕ್ ಅಳವಡಿಕೆ, ಸರ್ಕಾರಿ ಶಾಲಾ ಕಟ್ಟಡ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಯಾವುದೇ ಬೇಧಭಾವವಿಲ್ಲದೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಯಕ್ಸಂಬಾ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನೀಲ ಸಪ್ತಸಾಗರೆ ಎಂದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2.5 ಕೋಟಿ ರೂ. ವೆಚ್ಚದ ಯಕ್ಸಂಬಾ ಪಟ್ಟಣ ಪಂಚಾಯಿತಿ ಬೃಹತ್ ಕಟ್ಟಡ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೃಹತ್ ಕಟ್ಟಡ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ನೆರವೇರಿಸಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಉಪಾಧ್ಯಕ್ಷೆ ಸುಜಾತಾ ಚಿತಳೆ, ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ ರೇಂದಾಳೆ, ದಿಲೀಪ ದೇಸಾಯಿ, ಮಾಜಿ ತಾಪಂ ಸದಸ್ಯ ರಾಜೇಂದ್ರ ಕರಾಳೆ, ಪ್ರದೀಪ ಜಾಧವ, ಗುತ್ತಿಗೆದಾರ ಸಿ.ಎಂ.ಜೋನಿ, ಪಪಂ ಸದಸ್ಯರಾದ ಕಿರಣ ಮಾಳಿ, ರವೀಂದ್ರ ಮಾನೆ, ಶಿವಗೌಡ ಬಾವಚೆ, ಚಿದಾನಂದ ಬೆಳ್ಳೆ, ಉಮೇಶ ಸಾತ್ವರ, ಅಂಕುಶ ಖೋತ, ಜಮ್ಮನಶಾ ಮಕಾನದಾರ, ರವೀಂದ್ರ ಖೋತ, ವಿಠ್ಠಲ ನಾಯಿಕ, ಸೈಹೀದಾ ಮುಲ್ಲಾ, ಪ್ರೇಮಾ ಮಾಳಗೆ, ರಾಜಶ್ರೀ ಮಗದುಮ್ಮ, ಸಂಗೀತಾ ಪವಾರ, ಶಾನಕ್ಕ ರಾಂಗೋಳೆ, ಮಹಾಲಿಂಗ ವಸದ, ಜ್ಯೋತಿ ಸಾತ್ವರ, ಮುನೀರ ದಾಡಿವಾಲೆ, ತಹಸೀಲ್ದಾರ್, ಚಿದಂಬರ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net