

ರಾಯಬಾಗ: ಗ್ರಾಹಕರು ವಸ್ತುಗಳು ಮತ್ತು ಸೇವೆಯನ್ನು ಜಾಗ್ರತೆಯಿಂದ ಪಡೆಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜಪ್ಪ ಕೆ.ಎಂ. ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನ ಕಾರ್ಯಕ್ರಮ ಉದ್ಘಾಟಿಸಿ, ನೊಂದ ಗ್ರಾಹಕರು ಎಲ್ಲ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಪಡೆಯಬೇಕು ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಮಂಜುನಾಥ ಪಾನಘಂಟಿ ಮಾತನಾಡಿ, ಗ್ರಾಹಕರು ವಸ್ತು ಖರೀದಿಸಿದ ಬಿಲ್ ಜೋಪಾನವಾಗಿ ಇಟ್ಟುಕೊಳ್ಳಬೇಕು. ಇದರಿಂದ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಅಧ್ಯಕ್ಷತೆ ವಹಿಸಿದ್ದರು. ಸ.ಸ.ಅಭಿಯೋಜಕ ಮಹಾವೀರ ಗಂಡವ್ವಗೋಳ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಿ.ಬಿರಾದರಪಾಟೀಲ, ಸಹ ಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಜಿ ಯು.ಎನ್.ಉಮರಾಣಿ, ವಕೀಲರಾದ ಎ.ಬಿ.ಮಂಗಸೂಳಿ, ಟಿ.ಕೆ.ಶಿಂಧೆ, ಜಿ.ಡಿ.ಕುಲಕರ್ಣಿ, ವಿ.ಎಂ.ಗಲಗಲಿ, ಎ.ಬಿ.ಧಪ್ಪಾದುಳೆ, ಆರ್.ಎನ್.ಲೋಕುರೆ, ಡಿ.ಎಲ್.ದುರ್ಗನ್ನವರ, ಎಂ.ಎಂ.ಪಾಟೀಲ, ಎಸ್.ಎ.ಕೊಚೇರಿ, ವಿ.ಎಸ್.ಶಿಂಧೆ, ಎಂ.ಎಸ್.ಪೂಜಾರಿ, ಎಸ್.ಪಿ.ರೆಂಟೆ, ಎಸ್.ಎಂ.ಕಳ್ಳೆ ಇದ್ದರು.