ಕಾರ್ಪೋರೇಟ್‌ಗಳಿಗೆ ಒಪ್ಪಿಸುವ ದುರುದ್ದೇಶ

Kudlgi Rto labers
ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ಶುಕ್ರವಾರ ಸಂಜೆ ರಸ್ತೆ ಸಾರಿಗೆ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಪ್ರಮುಖರಾದ ಮಯೂರ ಮಂಜು, ಕೆ.ಎಂ.ಸಂತೋಷ, ಕೆ.ಕೈಲಾಶ್ ಮೂರ್ತಿ, ಸಿ.ವಿರೂಪಾಕ್ಷಪ್ಪ ಇತರರಿದ್ದರು.
Published on

ಕೂಡ್ಲಿಗಿ: ಕೇಂದ್ರ ಸರ್ಕಾರದ 2019ರ ಮೋಟಾರು ವಾಹನಗಳ ಅಧಿನಿಯಮದ ತಿದ್ದುಪಡಿ ಮತ್ತು ವಾಹನಗಳ ಗುಜರಿಗೆ ಎಸೆಯುವ ನೀತಿಯು ಇಡೀ ರಸ್ತೆ ಸಾರಿಗೆ ಕ್ಷೇತ್ರವನ್ನೇ ಬೃಹತ್ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವ ದುರುದ್ದೇಶ ಹೊಂದಿದೆ ಎಂದು ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ತಾಲೂಕು ಉಪಾಧ್ಯಕ್ಷ ಮಯೂರ ಮಂಜು ಆರೋಪಿಸಿದರು.

ಪಟ್ಟಣದ ಮದಕರಿ ವೃತ್ತದಲ್ಲಿ ಶುಕ್ರವಾರ ಸಂಜೆ ರಸ್ತೆ ಸಾರಿಗೆ ಕಾರ್ಮಿಕ ರಾಜ್ಯಮಟ್ಟದ ಸಮಾವೇಶ ಕುರಿತ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

15 ವರ್ಷಗಳ ಹಳೆಯ ವಾಹನಗಳನ್ನು ಒಪ್ಪಿಸುವ ಗುಜರಿ ಪಾಲಿಸಿ ನೀತಿ ಜಾರಿ ಮಾಡಲು ಈಗಾಗಲೇ ಸರ್ಕಾರ ಮುಂದಾಗಿದೆ. ಇದರಿಂದ ಚಾಲಕರು ನಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷ ವಾಹನಗಳ ಎಫ್‌ಸಿ ಮಾಡಿ ರಸ್ತೆಯಲ್ಲಿ ಓಡಾಡಲು ಅರ್ಹತೆ ಇದ್ದರೆ ಆರ್‌ಟಿಒ ಅನುಮತಿ ನೀಡುತ್ತಿತ್ತು. ಆದರೆ, ಸರ್ಕಾರದ ನೀತಿಯಿಂದಾಗಿ ಕಾರ್ಪೋರೇಟ್ ಬಂಡವಾಳಶಾಹಿಗಳಿಗೆ ಹಾಗೂ ವಾಹನ ತಯಾರು ಮಾಡುವ ಮಾಲೀಕರಿಗೆ ಆದಾಯ ಮಾಡಿಕೊಡುವ ಹುನ್ನಾರ ಅಡಗಿದೆ.

ರಸ್ತೆ ಸಾರಿಗೆ ಕಾರ್ಮಿಕರಿಗೆ ಆಳುವ ಸರ್ಕಾರಗಳು ಸೌಲಭ್ಯ ನೀಡದೆ ಬರೀ ನಮ್ಮಿಂದ ತೆರಿಗೆ ಹಾಗೂ ದಂಡ ವಸೂಲಿ ಮಾಡಿ ಜೀವನವನ್ನು ಅಭದ್ರಗೊಳಿಸಿವೆ ಎಂದು ದೂರಿದರು. ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷ, ತಾಲೂಕು ಕಾನೂನು ಸಲಹೆಗಾರ ಸಿ.ವಿರೂಪಾಕ್ಷಪ್ಪ ಮಾತಾನಾಡಿದರು. ಒಕ್ಕೂಟದ ಕಾರ್ಯದರ್ಶಿ ಕೆ.ಕೈಲಾಶ್ ಮೂರ್ತಿ, ಪ್ರಮುಖರಾದ ಎಸ್.ಅನಂತಶಯನ, ಹುಸೇನ್ ಸಾ, ಚನ್ನಬಸವ, ಶಿವಮೂರ್ತಿ, ವಿಠೋಬಾ, ಕುಮಾರಸ್ವಾಮಿ, ರಮೇಶ,ರಾಮು, ನಾಗರಾಜ, ಕಿಶೋರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net