

ಕೌಜಲಗಿ: ಸ್ಥಳಿಯ ಗ್ರಂಥಾಲಯ ಶತಮಾನ ಕಂಡರೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳೇ ಇಲ್ಲಿಲ್ಲ ಎಂದು ವಿದ್ಯಾರ್ಥಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಇಟ್ಟಗೌಡರ, ಅಧ್ಯಕ್ಷ ರಾಮಣ್ಣ ಈಟಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಂಥಾಲಯ ನವೀಕರಣಗೊಂಡು ಡಿಜಿಟಲ್ ಸ್ಪರ್ಶ ಪಡೆದಿದೆ. ನಿತ್ಯ ಬಹಳಷ್ಟು ಓದುಗರು ಬರುತ್ತಾರೆ. ಅವರಿಗೆ ಇಲ್ಲಿ ದಿನಪತ್ರಿಕೆಗಳು ಬಿಟ್ಟರೆ ಮತ್ತೇನೂ ಸಿಗುವುದಿಲ್ಲ. ಗ್ರಾಮದಲ್ಲಿ ಆರು ಪ್ರೌಢಶಾಲೆ, 5 ಪ್ರಾಥಮಿಕ ಹಾಗೂ ಒಂದು ವಸತಿ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಇದ್ದರೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನೇಮಕ ಮಾಡಲಾಗಿರುವ ತಾತ್ಕಾಲಿಕ ಸಿಬ್ಬಂದಿ ಸಂಜೆ 4ರಿಂದ 7 ಗಂಟೆ ವರೆಗೆ ಮಾತ್ರ ಗ್ರಂಥಾಲಯ ತೆಗೆಯುತ್ತಾರೆ ಎಂದು ಆರೋಪಿಸಿದರು. ವೆಂಕಟೇಶ ದಳವಾಯಿ, ಹೊಳೆಪ್ಪ ಲೋಕಣ್ಣವರ, ಶಂಕರ ಜ್ಯೋತೆನ್ನವರ, ಅಶೋಕ ಯಲಿಗಾರ, ರಮೇಶ ಮುನ್ಯಾಳ ಇತರರಿದ್ದರು.