ಪರಿಹಾರ ನೀಡದ್ದಕ್ಕೆ ಹೆಸ್ಕಾಂ ಕಚೇರಿ ಆಸ್ತಿ ಜಪ್ತಿ

20KHANAPUR1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಖಾನಾಪುರ: ನ್ಯಾಯಾಲಯದ ಆದೇಶಂತೆ ರೈತರಿಗೆ ಪರಿಹಾರ ನೀಡಲು ನಿರಾಕರಿಸಿದ ಖಾನಾಪುರ ಹೆಸ್ಕಾಂ ಕಚೇರಿ ಆಸ್ತಿಯನ್ನು ಶುಕ್ರವಾರ ಜಪ್ತಿ ಮಾಡಲಾಗಿದೆ.  ನೊಂದ ರೈತರ ಪರ ವಕೀಲರು ಖಾನಾಪುರದ ಹೆಸ್ಕಾಂ ಕಚೇರಿಯಲ್ಲಿ ವಾಹನ, ಕಂಪ್ಯೂಟರ್ ಮತ್ತು ಕುರ್ಚಿಗಳನ್ನು ವಶಪಡಿಸಿಕೊಂಡಿದ್ದಾರೆ.

2016ರಲ್ಲಿ ಖಾನಾಪುರ ತಾಲೂಕಿನ ಚಿಕ್ಕಟ್ಟಿಹೊಳಿಯ ಈರಪ್ಪ ಸಣ್ಣಕ್ಕಿ, ಈರಣ್ಣ ದಾಸ್ತಿಕೊಪ್ಪ, ಸಿದ್ಧಯ್ಯ ಪೂಜಾರಿ, ಹಿರೇಹಟ್ಟಿಹೊಳಿಯ ಬಾಬು ಪಾಟ್ಕರ್ ಗದ್ದೆಯಲ್ಲಿನ ಕಬ್ಬು ವಿದ್ಯುತ್ ಕಂಬದಲ್ಲಿನ ಕಿಡಿಯಿಂದ ಸುಟ್ಟು ಹಾನಿ ಸಂಭವಿಸಿತ್ತು.

ಈ ಬಗ್ಗೆ ಹೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರೂ ಪರಿಹಾರ ಸಿಗದ ಕಾರಣ ಸಂತ್ರಸ್ತರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಸದರಿ ರೈತರಿಗೆ 3.11 ಲಕ್ಷ ರೂಪಾಯಿ ದಂಡ ಪಾವತಿಸಬೇಕೆಂದು ಕಳೆದ ವರ್ಷ ನ್ಯಾಯಾಲಯ ಆದೇಶಿಸಿತ್ತು. ಆದರೆ, ಹೆಸ್ಕಾಂ ಆದೇಶ ನಿರ್ಲಕ್ಷಿಸಿದ್ದರಿಂದ ನ್ಯಾಯಾಲಯ ಈಗ ಕಚೇರಿ ಆಸ್ತಿ ಜಪ್ತಿಗೆ ಆದೇಶಿಸಿದೆ. ಅದರಂತೆ ಶುಕ್ರವಾರ ರೈತರು ವಕೀಲರೊಂದಿಗೆ ಖಾನಾಪುರದ ಹೆಸ್ಕಾಂ ಕಚೇರಿಗೆ ತೆರಳಿ ವಾಹನ ಸಹಿತ ಕಂಪ್ಯೂಟರ್, ಟೇಬಲ್, ಕುರ್ಚಿ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net