ಸಮುದಾಯ ಭವನ ಸೌಲಭ್ಯಕ್ಕೆ ಕಲ್ಪಿಸಿ

bhvi
ಕಂಪ್ಲಿ ಭೋವಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಮಾತನಾಡಿದರು. ಪದಾಧಿಕಾರಿಗಳಾದ ವಿ.ಗೋವಿಂದರಾಜ ಯಂಕಪ್ಪ, ವಿ.ಸತ್ಯಪ್ಪ, ವಿ.ಶರಭಣ್ಣ, ವಿ.ನೀಲಕಂಠೇಶ, ಎಸ್.ವಿ.ಶ್ರೀನಿವಾಸ ಇತರರಿದ್ದರು.
Published on

ಕಂಪ್ಲಿ: ಭೋವಿ ಸಮುದಾಯ ಭವನ ನಿರ್ಮಾಣ ಪೂರ್ಣಗೊಳಿಸಲು 10 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲು ಶಾಸಕರು ಮುಂದಾಗಬೇಕು ಎಂದು ಕಂಪ್ಲಿ ತಾಲೂಕು ಭೋವಿ ಸಂಘದ ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಒತ್ತಾಯಿಸಿದರು.

ಇಲ್ಲಿನ ಭೋವಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಸಿದ್ದ ಕಂಪ್ಲಿ ತಾಲೂಕು ಭೋವಿ ಸಂಘದ ಮಹಾಜನಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಮುದಾಯ ಭವನದಲ್ಲಿ ಶೌಚಗೃಹ, ಆವರಣಗೋಡೆ, ಸ್ಟೇರ್‌ಕೇಸ್ ನಿರ್ಮಿಸಬೇಕಿದೆ. ಸಮುದಾಯ ಭವನದ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಿದೆ. ಭವನದ ಅಭಿವೃದ್ಧಿಗೆ ಶಾಸಕರು 10 ಲಕ್ಷ ರೂ. ಒದಗಿಸಲು ಮುಂದಾಗಬೇಕು ಎಂದರು.

ನಾನಾ ವಿಷಯಗಳ ಚರ್ಚೆ

ಸಭೆಯಲ್ಲಿ ಭೋವಿ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗಾಗಿ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಸಂಘದ ಗೌರವಾಧ್ಯಕ್ಷ ವಿ.ಗೋವಿಂದರಾಜ ಯಂಕಪ್ಪ, ಪದಾಧಿಕಾರಿಗಳಾದ ವಿ.ಸತ್ಯಪ್ಪ, ವಿ.ಶರಭಣ್ಣ, ವಿ.ನೀಲಕಂಠೇಶ, ಎಸ್.ವಿ.ಶ್ರೀನಿವಾಸ, ವಿ.ಗುರಪ್ಪ, ವಿ.ತಿಪ್ಪೇಸ್ವಾಮಿ ಹುಲುಗಪ್ಪ, ವಿ.ವೆಂಕಟರಮಣ ತಿಪ್ಪಣ್ಣ, ಮಂಡಾಳು ಹುಲುಗಪ್ಪ, ವಿ.ಬಿ.ಸೋಮನಾಥ, ವಿ.ವೆಂಕಟರಮಣ, ವಿ.ಸಣ್ಣಮೂಕಪ್ಪ, ವಿ.ಗೋವಿಂದಪ್ಪ, ವಿ.ತಿಪ್ಪೇಸ್ವಾಮಿ ಯಂಕಪ್ಪ, ವಿ.ಕುಣಕೇರಿ ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net