ಜನಸಾಮಾನ್ಯರಿಗೂ ಅಧ್ಯಾತ್ಮ ನೀಡಿದವರು ವೀರೇಶ್ವರ ಶ್ರೀ

14
ತೊಲಗಿ ಗ್ರಾಮದ ಸೋಮಲಿಂಗೇಶ್ವರ ಆಶ್ರಮದಲ್ಲಿ ಲಿಂ. ಸೋಮಯ್ಯ ಸ್ವಾಮೀಜಿ ಅವರ 31ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಚಿಂತನಾ ಸಭೆಯಲ್ಲಿ ಶಿವಪುತ್ರ ಸ್ವಾಮೀಜಿ ಮಾತನಾಡಿದರು. ಸಚ್ಚಿದಾನಂದ ಅವಧೂತರು, ಅದೃಶ್ಯಶಿವಾಚಾರ್ಯರು, ವೀರೇಶ್ವರ ಸ್ವಾಮೀಜಿ ಇತರರಿದ್ದರು.
Published on

ಇಟಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧ್ಯಾತ್ಮ ನೀಡುವ ಮೂಲಕ ಸ್ಮನ್ಮಾರ್ಗದಲ್ಲಿ ಸಾಗುವಂತೆ ಮಾಡಿದ ಕೀರ್ತಿ ಲಿಂ. ಸೋಮಯ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಸ್ವಾಮೀಜಿ ಹೇಳಿದರು.

ಸಮೀಪದ ತೊಲಗಿ ಗ್ರಾಮದ ಸೋಮಲಿಂಗೇಶ್ವರ ಆಶ್ರಮದಲ್ಲಿ ಲಿಂ. ಸೋಮಯ್ಯ ಸ್ವಾಮೀಜಿ ಅವರ 31ನೇ ಪುಣ್ಯಾರಾಧನೆ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಧರ್ಮ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಎಂ.ಕೆ.ಹುಬ್ಬಳ್ಳಿಯ ಸಚ್ಚಿದಾನಂದ ಅವಧೂತರು ಮಾತನಾಡಿ, ಬಸವಾದಿ ಶರಣರ ಕಾಯಕ ದಾಸೋಹ ತತ್ವ ಪರಿಚಯಿಸುವಲ್ಲಿ ಸತ್ಸಂಗಗಳ ಪಾತ್ರ ಮುಖ್ಯವಾಗಿದೆ ಎಂದರು.

ಪೀಠಾಧ್ಯಕ್ಷ ಅದೃಶ್ಯಶಿವಾಚಾರ್ಯರು, ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ರವಿಶಂಕರ ಸ್ವಾಮೀಜಿ, ಕಾದರವಳ್ಳಿಯ ಜರಂತಿಮಠ ಶರಣರು, ಕುಮಾರ ಮಠದ, ರಾಜೇಂದ್ರ ಸಾಣಿಕೊಪ್ಪ, ಇಟಗಿ ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣ ದೊಡಮನಿ, ರಾಯಣ್ಣ ಬಳಗಪ್ಪನವರ, ರತ್ನಾಕರ ಠಕ್ಕಾಯಿ, ಮಲ್ಲೇಶಿ ನಡುವಿನಮನಿ, ಶಂಕರಯ್ಯ ಚಿಕ್ಕಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net