ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

20 Jaggu 16-Web
Published on

ಬೆಳಗಾವಿ: ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಿಎಸ್‌ಆರ್ ಪಾಲುದಾರ ಮುಕುಲ್ ಮಾಧವ ಫೌಂಡೇಷನ್ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಆಯ್ದ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕರೊನಾ ಸಂಕಷ್ಟ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಸುಮಾರು 900 ಕಿಟ್ ವಿತರಣೆ ಮಾಡಲಾಯಿತು. ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಫಿನೋಲೆಕ್ಸ್ ಕಂಪನಿ ಧಾರವಾಡ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಕಾಶ ಬೀಳಗಿ, ಧಾರವಾಡ ವಿಭಾಗದ ವಲಯ ಕಚೇರಿ ಸಹಾಯಕ ಆಯುಕ್ತ ಆರ್.ಎಂ.ಕುಲಕರ್ಣಿ, ಪಾಲಿಕೆ ಅಭಿಯಂತರಾದ ನಯನಾ ಕೆ.ಎಸ್., ಸರೋಜಾ ಪೂಜಾರ, ನವೀನ ಎಂ.ಎನ್., ಫರೀದಾಬಾನು ನದ್ಾ, ಮಹಾಂತೇಶ ಮ್ಯಾಗೇರಿ, ಮಹಾಂತೇಶ ನಿಡವಣಿ, ಜ್ಯೋತಿ ಚುಳುಕಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net