ಮಕ್ಕಳಿಗೆ ವಸಂತೋತ್ಸವ ಸಹಕಾರಿ

11Huk1
Published on

ಹುಕ್ಕೇರಿ: ಬೌದ್ಧಿಕ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಹೀಗಾಗಿ ವಸಂತೋತ್ಸವ ಮತ್ತು ಮಕ್ಕಳ ಹಬ್ಬ ಆಯೋಜಿಸಲಾಗುತ್ತಿದೆ ಎಂದು ಮಹಾವೀರ ಶಿಕ್ಷಣ ಸಂಸ್ಥೆ ಚೇರ್ಮನ್ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಸಂತೋತ್ಸವ ಮತ್ತು ಮಕ್ಕಳ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ಕ್ರಿಯಾಶೀಲತೆ ವೀಕ್ಷಿಸಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.

ವಾರ್ಷಿಕ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಿ ಚಿಕ್ಕಮಗಳೂರು ಗೌರಿಗದ್ದೆ ಸ್ವರ್ಣ ಪೀಠಾಕಾಪುರದ ವಿನಯ ಗುರೂಜಿ ಮಾತನಾಡಿ, ಮಕ್ಕಳಲ್ಲಿ ಧ್ಯಾನ, ಯೋಗ, ಸತ್ಸಂಗ ಹಾಗೂ ದೇಶ ಭಕ್ತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜೈನ ತೀರ್ಥಂಕರ ಹೆಸರಿನಲ್ಲಿ ಸ್ಥಾಪಿತಗೊಂಡ ಮಹಾವೀರ ಶಿಕ್ಷಣ ಸಂಸ್ಥೆಯು ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಎಂದು ತಿಳಿಸಿದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಆಡಳಿತಾಧಿಕಾರಿ ಅನುಪಮಾ ಕಬಾಡಗಿ, ಪದ್ಮಶ್ರೀ ನಿಲಜಗಿ, ಮುಖಂಡರಾದ ಅಶೋಕ ಪಾಟೀಲ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಪ್ರಾಚಾರ್ಯ ಉದಯ ಕಾಂಬಳೆ, ಸೊಹೇಲ ಹಿಪ್ಪರಗಿ, ರಮೇಶ ಕೂಗೆ, ಉಪನ್ಯಾಸಕರಾದ ಶರಣ ಎಸ್.ಶ್ವೇತಾ ಕುಡಚಿಮಠ, ಸಂಗಮೇಶ ಕರಹೊನ್ನವರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net