ಮಕ್ಕಳಿಗೆ ಸಂಸ್ಕಾರ ಅತಿ ಮುಖ್ಯ

2
ಗೋಕಾಕ ನಗರದ ವಿದ್ಯಾನಿಕೇತನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಕೆ.ಬಿ.ಮೆವುಂಡಿಮಠ ಉದ್ಘಾಟಿಸಿದರು. ಆರ್.ಆರ್. ಗಾಣಿಗೇರ, ಬಸವರಾಜ ಕೋಟಗಿ, ಎಸ್.ಎ. ಪಾಟೀಲ ಇದ್ದರು.
Published on

ಗೋಕಾಕ: ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ನಗರದ ಕೆಎಲ್‌ಇ ಸಂಸ್ಥೆಯ ಸಿ.ಎಸ್. ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಬಿ.ಮೆವುಂಡಿಮಠ ಹೇಳಿದರು.

ನಗರದ ವಿದ್ಯಾನಿಕೇತನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು. ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಇದರಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಸಂಸ್ಥೆಯ ಉಪಾಧ್ಯಕ್ಷ ಎಸ್.ಎ. ಪಾಟೀಲ, ಕಾರ್ಯದರ್ಶಿ ಸುರೇಶ ಜಾಧವ, ಮುಖ್ಯ ಶಿಕ್ಷಕಿ ಆರ್.ಆರ್. ಗಾಣಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net