ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯ

29 MASKI 03
ಮಸ್ಕಿ ಮುರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯ ಬೋಧಕ ಬೋಧಕೇತರ ವಸತಿ ಗೃಹ ಉದ್ಘಾಟನೆ ಹಾಗೂ ವಸತಿ ಶಾಲೆಯ ಕಟ್ಟಡ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಸದ ಕೆ.ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ, ಡಾ. ಮಲ್ಲಪ್ಪ.ಕೆ ಯರಗೋಳ, ಅಮರೇಶ ಯಾದವ್, ನರಸರಡ್ಡಿ ಇತರರಿದ್ದರು.
Published on

ಮಸ್ಕಿ: ಗ್ರಾಮೀಣ ಪ್ರದೇಶದ ಹಿಂದುಳಿದ ಮಕ್ಕಳ ಹಿತದೃಷ್ಟಿಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸರ್ಕಾರ ಆರಂಭಿಸಿದ್ದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ಶಾಲೆಗಳು ಯಶಸ್ವಿಯಾಗಿವೆ ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.


ಪಟ್ಟಣದ ಮುರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯ ಬೋಧಕ-ಬೋಧಕೇತರ ವಸತಿ ಗೃಹ ಉದ್ಘಾಟನೆ ಹಾಗೂ ಬಿಸಿಎಂ ವಸತಿ ಶಾಲೆಯ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡಲು ವಸತಿ ಶಾಲೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಿದಾನಂದಪ್ಪ ಇಂಜಿನಿಯರ್ ಮಾಲತೇಶ, ಪ್ರಾಂಶುಪಾಲರಾದ ಚನ್ನಬಸಪ್ಪ, ಸಂಗಮೇಶ ಕೊಳ್ಳಿ, ಗುತ್ತಿಗೆದಾರ ಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net