

ಬೈಲಹೊಂಗಲ: ಗುರುಕುಲ ಮಾದರಿಯ ಸಂಸ್ಕಾರಯುತ, ನೈತಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಹೇಳಿದರು.
ಸಮೀಪದ ನಯಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಹಾಗೂ ಶಾಲಾ ಮಕ್ಕಳ ಸಂಸತ್ ಪದಗ್ರಹಣ ಮತ್ತು ವಿವಿಧ ಸಂಘಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು ಎಂದರು.
ತಾಲೂಕು ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಮಕ್ಕಳು ವಿದ್ಯಾವಂತರಾಗುವ ಜತೆಗೆ ಸಂಸ್ಕಾರವಂತರೂ ಆದರೆ ಸಮಾಜ ಹಾಗೂ ಪಾಲಕರಿಗೆ ಅನುಕೂಲವಾಗುತ್ತದೆ ಎಂದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುಮಂಗಲಾ ಜಿಗಜಿನ್ನಿ, ಎಸ್‌ಡಿಎಂಸಿ ನೂತನ ಅಧ್ಯಕ್ಷ ನಾರಾಯಣ ನಲವಡೆ, ಗ್ರಾಪಂ ಅಧ್ಯಕ್ಷ ದೀಪಕ ಶಟೋಜಿ ಮಾತನಾಡಿದರು. ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ನಾರಾಯಣ ಶೀರೋಮನಿ, ಮಹಾಂತೇಶ ಮರೆಕ್ಕನವರ, ಉಮೇಶ ಹುಲಮನಿ, ಮೌನೇಶ ಪತ್ತಾರ, ಬಸವರಾಜ ಕಡಕೋಳ, ಎಂ.ಎನ್. ತೋರಣಗಟ್ಟಿ, ಗಣಪತಿ ಬಾಗಲೆ, ಎಂ.ಎಂ.ಸಂಗೊಳ್ಳಿ, ದೇಮನಗೌಡ ಶೀಲವಂತರ, ಗಂಗಯ್ಯ ಹಿರೇಮಠ, ಕಲ್ಲಪ್ಪ ಏಣಗಿ, ಎಸ್‌ಡಿಎಂಸಿ ಉಪಾಧ್ಯೆಕ್ಷೆ ಗೀತಾ ಚಂದರಗಿ, ನಿಂಗಪ್ಪ ಅಳಗೋಡಿ, ರವಿ ಬಡಿಗೇರ, ಸೋಮನಿಂಗ ಅಡಕಿ, ಶ್ರೀಕಾಂತ ನಲವಡೆ, ಬಾಬು ಮಾಳಗಿ, ಬಸವ್ವ ಹಲ್ಕಿ, ಲಲಿತಾ ಹರಿಜನ ಇತರರಿದ್ದರು