ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅವಶ್ಯ

Untitled design
ಹರಪನಹಳ್ಳಿ ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆನ್ನು ವಿ.ವಿ ಸಂಘದ ಅಧ್ಯಕ್ಷ ಆರ್.ರಾಮನಗೌಡ ಉದ್ಘಾಟಿಸಿದರು. ವಿ.ವಿ.ಸಂಘದ ಸಹಕಾರ್ಯದರ್ಶಿ ದರೂರು ಶಾಂತನಗೌಡ, ಎಡಿಬಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೋರಿವಿರುಪಾಕ್ಷಪ್ಪ, ವಿ.ವಿ.ಸಂಘದ ಸದಸ್ಯರಾದ ಎಸ್.ಮಲ್ಲನಗೌಡ, ವಿರೂಪಾಕ್ಷಗೌಡ, ಕೆರೇನಹಳ್ಳಿ ವಿಶ್ವನಾಥ, ಕಲ್ಗುಡಿ ಮಂಜುನಾಥ ಇದ್ದರು.
Published on

ಹರಪನಹಳ್ಳಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಲಿವೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಾಮನಗೌಡ ತಿಳಿಸಿದರು.

ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮಾತನಾಡಿದರು.
ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಂ.ಎಂ.ಮೃತ್ಯುಂಜಯ ಮಾತನಾಡಿ,

ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಹಿತ್ಯ ಅಭ್ಯಾಸ ಮಾಡಿ, ಸಾಹಿತ್ಯದ ಅಭ್ಯಾಸದಿಂದ ಮನಸ್ಸಿಗೆ ಆನಂದ, ಶಬ್ದ ಸಂಪತ್ತು ವೃದ್ಧಿಗೊಳ್ಳುತ್ತದೆ, ಉತ್ತಮ ಮನುಷ್ಯನಾಗಿ ಹೊರಹೊಮ್ಮಲು ಸಾಧ್ಯ ಎಂದರು.

ವಿ.ವಿ.ಸಂಘದ ಸಹಕಾರ್ಯದರ್ಶಿ ಶಾಂತನಗೌಡ, ಎಡಿಬಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೋರಿವಿರುಪಾಕ್ಷಪ್ಪ, ಜಾನೆಕುಂಟೆ ಸಣ್ಣ ಬಸವರಾಜ ಪ್ರಾಚಾರ್ಯ ಡಾ.ಸಿದ್ಧಲಿಂಗಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net