

ಮಾಂಜರಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿ ಎಂದು ಚಿಕ್ಕೋಡಿ ಅಭಿಯಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಸಚಿನ ಮೆಕ್ಕಳಕಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಎಸ್.ಸಿ. ಪಾಟೀಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಕೋರೆ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ ತಂದೆ-ತಾಯಿ ಋಣ ತೀರಿಸಬೇಕು ಎಂದರು. ಸಲಹಾ ಸಮಿತಿ ಸದಸ್ಯರಾದ ಅಣ್ಣಾಸಾಹೇಬ ಜಕಾತೆ, ಕುಮಾರ ಕೋರೆ, ವಿವೇಕ ನಷ್ಟೆ, ತುಕಾರಾಮ ಪಾಟೀಲ, ಬಿ.ಎಸ್.ಅಂಬಿ, ಜೆ. ಎಸ್. ತಮಗೌಡ, ಪಿ.ಎನ್. ತಳವಾರ, ಎಂ.ಎಸ್. ಕಾನಡೆ, ಪಾರ್ಥ ಸಾರಥಿ, ನಂದಾ, ನಿಯೋಗಿ, ಸಂತೋಷ ಹಿರೇಮಠ, ಬಿ.ಎಸ್. ಜಕಾತಿ ಇತರರಿದ್ದರು.