ಮಕ್ಕಳಿಗೆ ಶಿಕ್ಷಣ-ಸಂಸ್ಕಾರ ಅವಶ್ಯ

12..12
ಸುಟ್ಟಟ್ಟಿ ಗ್ರಾಮದ ಲಕ್ಷ್ಮೀದೇವಿ ಹಾಗೂ ಅಡವಿ ಲಕ್ಷ್ಮೀದೇವಿ ದೇವಸ್ಥಾನದ ಪ್ರಾಂಗಣ ಉದ್ಘಾಟನೆ ಸಮಾರಂಭಕ್ಕೆ ಡೊಳ್ಳು ಬಾರಿಸುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಶಾಸಕ ಮಹೇಂದ್ರ ತಮ್ಮಣ್ಣವರ, ಅಮರೇಶ್ವರ ಮಹಾರಾಜರು, ಕಲ್ಮೇಶ್ವರ ಮಹಾರಾಜರು, ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಇತರರಿದ್ದರು.
Published on

ಕುಡಚಿ: ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಹಾಗಾಗಿ, ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಸುಟ್ಟಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಕ್ಷ್ಮೀದೇವಿ ಹಾಗೂ ಅಡವಿ ಲಕ್ಷ್ಮೀದೇವಿ ದೇವಸ್ಥಾನದ ಪ್ರಾಂಗಣದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ನಮ್ಮ ಕಲೆ ಮತ್ತು ಸಂಸ್ಕೃತಿ ಶ್ರೇಷ್ಠವಾಗಿದ್ದು, ಇತ್ತೀಚೆಗೆ ಮರೆಯಾಗತೊಡಗಿದೆ. ಈ ಪ್ರಾಂಗಣದಲ್ಲಿ ಡೊಳ್ಳು ಕುಣಿತದಂತಹ ಹಳ್ಳಿ ಸೊಬಗಿನ ಕಾರ್ಯಕ್ರಮ ಆಯೋಜಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದರು.

ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ಕುಡಚಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ. ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು. ಎಂಎಲ್ಸಿ ಲಖನ್ ಜಾರಕಿಹೊಳಿ ಅವರ 5 ಲಕ್ಷ ರೂ. ಅನುದಾನ, ಗ್ರಾಮದ ಕುರಿಗಾರರ ಸಂಘದ ವತಿಯಿಂದ 9 ಲಕ್ಷ ರೂ., ಹಾಗೂ ದೇಣಿಗೆ ಹಣ ಸೇರಿ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಲಕ್ಷ್ಮೀದೇವಿ ಪ್ರಾಂಗಣ ನಿರ್ಮಿಸಲಾಗಿದೆ. ಅಡವಿ ಲಕ್ಷ್ಮೀದೇವಿ ಪ್ರಾಂಗಣ ನಿರ್ಮಾಣಕ್ಕೆ ದೇಣಿಗೆ ಹಾಗೂ ಕುರಿಗಾರರು ನೀಡಿದ ಒಟ್ಟು 7 ಲಕ್ಷ ರೂ. ಹಣದಲ್ಲಿ ಪ್ರಾಂಗಣ ನಿರ್ಮಿಸಲಾಗಿದೆ.

ಕುರಿಗಾರರ ಸಂಘದಿಂದ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಮಹೇಂದ್ರ ತಮ್ಮಣರ ಅವರನ್ನು ಸತ್ಕರಿಸಲಾಯಿತು. ಅಮರೇಶ್ವರ ಮಹಾರಾಜರು, ಕಲ್ಮೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಯುವ ಮುಖಂಡ ಅಮಿತ ಘಾಟಗೆ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಸಂಜೀವಕುಮಾರ ಬಾನೆ, ಜಿಪಂ ಮಾಜಿ ಸದಸ್ಯ ಡಿ.ಎಸ್.ನಾಯಿಕ, ಅಲ್ಲಾವುದ್ದೀನ್ ರೋಹಿಲೆ, ಲಕ್ಕಪ್ಪ ಪೂಜೇರಿ, ಪಿಕೆಪಿಎಸ್ ಅಧ್ಯಕ್ಷ ಮುರಾರಿ ಬಾನೆ, ದಸಗೀರ ಕಾಗವಾಡೆ, ಶಿವಾನಂದ ಹೆಗಡೆ, ವಾಮಣ್ಣ ಹಟ್ಟಿಮನಿ, ಅಜಿತ ಹೇಗಡೆ, ಅನಿಲ ದೇಸಾಯಿ, ಗುರುನಾಥ ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net