ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳಸಿ

25 gvt 01
ಗಂಗಾವತಿ ಉಳ್ಳಿಡಗ್ಗಿ ಸಾಯಿಬಾಬಾನಗರದಲ್ಲಿ ಜೀವನ ಪಬ್ಲಿಕೇಶನ್ಸ್‌ನಿಂದ ಆಯೋಜಿಸಿದ್ದ ಅರಳು ಕುಸುಮ ಕಥಾ ವಾಚನ ಕಾರ್ಯಕ್ರಮದಲ್ಲಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಮಾತನಾಡಿದರು.ಸ.ಪ್ರಾ.ಶಾಲೆ ಮುಖ್ಯಶಿಕ್ಷಕ ಸೋಮಪ್ಪ ಜಂಬಲಗಿ,ಸಂಗಾಪುರ ಜೈನ ಪಬ್ಲಿಕ್ ಶಾಲೆ ಶಿಕ್ಷಕಿ ಕವಿತಾ ಇತರರಿದ್ದರು.
Published on

ಗಂಗಾವತಿ: ಮಾತೃ ಭಾಷೆಯಲ್ಲಿ ಮಕ್ಕಳಿಗೆ ನೈತಿಕ ಕತೆಗಳನ್ನು ಹೇಳಬೇಕಿದ್ದು, ಸಾಹಿತ್ಯಾಭಿರುಚಿ ಬೆಳೆಸಬೇಕಿದೆ ಎಂದು ತಾಲೂಕಿನ ವಡ್ಡರಹಟ್ಟಿ ಉಳ್ಳಿಡಗ್ಗಿ ಸ.ಪ್ರಾ.ಶಾಲೆ ಮುಖ್ಯಶಿಕ್ಷಕ ಸೋಮಪ್ಪ ಜಂಬಲಗಿ ಹೇಳಿದರು.

ನಗರದ ಉಳ್ಳಿಡಗ್ಗಿಯ ಸಾಯಿಬಾಬಾನಗರದಲ್ಲಿ ಜೀವನ ಪಬ್ಲಿಕೇಶನ್ಸ್‌ನಿಂದ ಭಾನುವಾರ ಆಯೋಜಿಸಿದ್ದ ಅರಳು ಕುಸುಮ ಕಥಾ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕಿದ್ದು, ಕತೆ ಹೇಳುವ ಮತ್ತು ಕೇಳುವ ಅಭ್ಯಾಸ ಬೆಳೆಸಬೇಕಿದೆ. ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯ ರಚಿಸುವ ಕೆಲಸವಾಗಬೇಕಿದೆ ಎಂದರು.

ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಪುಸ್ತಕ ಮುದ್ರಣಕ್ಕೆ ಮಾತ್ರ ಪಬ್ಲಿಕೇಶನ್ಸ್ ಸೀಮಿತವಾಗದೇ ಸಾಂಸ್ಕೃತಿಕವಾಗಿ ಮಕ್ಕಳನ್ನು ಒಳಗೊಂಡಂತೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ. ಕಥೆ ಕೇಳುವ ಮತ್ತು ಹೇಳುವ ಪ್ರಕ್ರಿಯೆಯಿಂದ ನೆನಪಿನ ಶಕ್ತಿ, ಶಬ್ದ ಸಂಪತ್ತು, ಕಲ್ಪನಾ ಶಕ್ತಿ ಹೆಚ್ಚಲಿದೆ ಎಂದರು.

ಮಕ್ಕಳಾದ ಪ್ರಕತಿ, ಶ್ರೇಯಾ, ಸನ್ವಿತ್, ಜೀವನ್ ಬಿರಾದಾರ್, ಸಾನ್ವಿ, ಸಮರ್ಥ, ತಬಸ್ಸುಮ್, ಜಾಹ್ನವಿ, ಪ್ರೀತಂ, ಇಬ್ರಾಹಿಂ, ಕಾರ್ತಿಕ್ ಇತರರು ಕತೆ ವಾಚಿಸಿದರು. ವಾರ್ಡ್ ಹಿರಿಯರಾದ ಚಂದ್ರಶೇಖರ್ ಮತ್ತು ವೆಂಕುಬಾಯಿ, ಸಂಗಾಪುರ ಜೈನ ಪಬ್ಲಿಕ್ ಶಾಲೆ ಶಿಕ್ಷಕಿ ಕವಿತಾ,

ಮುಖಂಡರಾದ ಪರಸಪ್ಪ ಕುರುಗೋಡ, ಮಮತಾ ಶರಣಪ್ಪ, ಪಾರ್ವತಮ್ಮ, ಕಾವ್ಯ ಉಮೇಶ, ಜೀವಿಕಾ, ಪ್ರಮೀಳಾ,ಪ್ರೀತಿ ಕಿರಣ, ವೆಂಕುಬಾಯಿ, ಕವಿತಾ ಮಲ್ಲನಗೌಡರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net