ಮಕ್ಕಳಿಗೆ ಶಾಂತಿ, ಏಕತೆ ಅರಿವು ಮೂಡಿಸಿ

Untitled design (2)
ತಾಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಯಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಬಿಎಚ್‌ಇಒ ಶಿವಪ್ಪ, ಮುಖ್ಯ ಶಿಕ್ಷಕ ವಿನಯ್, ಶಿಕ್ಷಕರಾದ ಮಧುಕುಮಾರ್, ಬಸವರಾಜ್ ಇತರರಿದ್ದರು.
Published on

ಸಂಡೂರು: ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪಾಲಕರು, ಗುರುಗಳನ್ನು ಗೌರವದಿಂದ ಕಾಣಬೇಕು ಎಂದು ಮುಖ್ಯಶಿಕ್ಷಕ ವಿನಯ್ ಹೇಳಿದರು.


ತಾಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಸೌಹಾರ್ದ, ಶಾಂತಿ, ಏಕತೆ ಬಗ್ಗೆ ಅರಿವು ಮೂಡಿಸಬೇಕು. ಪ್ರತಿದಿನ 10 ಗಂಟೆ ಅಭ್ಯಾಸ ಮಾಡಿದರೆ ಸಾಧನೆ ಸುಲಭವಾಗುತ್ತದೆ. ಉನ್ನತ ಹುದ್ದೆಯ ಗುರಿ ನಿಗದಿಪಡಿಸಿಕೊಳ್ಳಬೇಕು ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿದರು.

ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಮಧುಕುಮಾರ್, ಬಸವರಾಜ್, ವಿದ್ಯಾರ್ಥಿಗಳಾದ ವಿಜಯ್, ಅನ್ನಪೂರ್ಣ, ಸುಪ್ರೀತ್, ಪವನ್, ಚಂದ್ರು, ಕುಮಾರಸ್ವಾಮಿ, ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net