

ಕವಿತಾಳ: ಅಂಗನವಾಡಿ ಮಕ್ಕಳ ಮನೋವಿಕಾಸಕ್ಕೆ ಬಾಲಮೇಳ ಕಾರ್ಯಕ್ರಮ ಪೂರಕವಾಗಿದೆ ಎಂದು ಜಿಲ್ಲಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಹೇಳಿದರು.
ತೋರಣದಿನ್ನಿಯ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಕೆಕೆಆರ್‌ಡಿಬಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕಲಿಕೆ ಟಾಟಾ ಟ್ರಸ್ಟ್ ಆಶ್ರಯದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಡಿಲು ಟ್ರಸ್ಟ್ ಅಧ್ಯಕ್ಷೆ ಮಲ್ಲಮ್ಮ ಉಟಕನೂರು ಮಾತನಾಡಿ, ಮಕ್ಕಳಲ್ಲಿ ಬಡವ-ಶ್ರೀಮಂತ ಭೇದಭಾವ ಇರುವುದಿಲ್ಲ. ನಾವು ಸಹ ಅಂಥ ತಾರತಮ್ಯದ ವಿಚಾರಗಳನ್ನು ತುಂಬಬಾರದು. ಅವರಂತೆ ಇರಲು ಬಿಡಬೇಕು. ನಮ್ಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ತಿಳಿಸಿದರು.
ಇರಕಲ್ ಮಠದ ಬಸವ ಪ್ರಸಾದ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್, ಟಾಟಾ ಟ್ರಸ್ಟ್ ಅಧ್ಯಕ್ಷ ತಾರಸಿಂಗ್, ಗಾಪಂ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ಹನುಮಂತ, ಮಾಜಿ ಅಧ್ಯಕ್ಷ ಉಮಾಪತಿ, ಪ್ರಮುಖರಾದ ದುರ್ಗಾ ಪ್ರಸಾದ, ತಿಮ್ಮಯ್ಯ, ಶಿವಬಸಪ್ಪಗೌಡ ಇಟಗಿ, ಅಂಗನವಾಡಿ ಮೇಲ್ವಿಚಾರಕಿ ಮಾಂತಮ್ಮ ಇತರರಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.