ಜಾನುವಾರುಗಳಿಗೆ ಸಿಕ್ತು ಮೇವು

web3
ಖೇಮಲಾಪುರ ಗ್ರಾಮದಲ್ಲಿ ಜಾನುವಾರುಗಳಿಗೆ ವಿತರಿಸಲು ಟ್ರಾೃಕ್ಟರ್‌ನಲ್ಲಿ ಮೇವು ತಂದಿರುವುದು. ಭಾರತಿ ಕಾಂಬಳೆ, ಎಸ್.ಆರ್.ಪಾಟೀಲ, ಮಲ್ಲಪ್ಪ ಮಿರ್ಜಿ, ಪುಟ್ಟಮ್ಮ ಗಸ್ತಿ ಇತರರು ಇದ್ದಾರೆ.
Published on

ಹಾರೂಗೇರಿ ಕ್ರಾಸ್: ಸಮೀಪದ ಖೇಮಲಾಪುರ, ಸಿದ್ಧಾಪುರ, ಶಿರಗೂರ ಗ್ರಾಮಗಳ ನೆರೆ ಸಂತ್ರಸ್ತರು ತಮ್ಮ ಜಾನುವಾರುಗಳನ್ನು ತಾತ್ಕಾಲಿಕ ಜಾನುವಾರು ಶಿಬಿರಕ್ಕೆ ಸ್ಥಳಾಂತರಿಸಿದ್ದರು. ಆದರೆ, ಸ್ಥಳಾಂತರಗೊಂಡ ದಿನದಿಂದ ಸಂಬಂಧಿಸಿದವರು ದನಕರುಗಳಿಗೆ ಮೇವು ನೀಡಿರಲಿಲ್ಲ.

ಈ ಕುರಿತು ಆ.3ರಂದು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ‘ಜಾನುವಾರು ಸ್ಥಿತಿ ಅಯೋಮಯ’! ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ದೌಡಾಯಿಸಿ 2 ಟ್ರಾೃಕ್ಟರ್ ಮೇವು ತಂದು ವಿತರಿಸಿದ್ದಾರೆ. ವಿಜಯವಾಣಿ ಕಾರ್ಯಕ್ಕೆ ನೆರೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೋಡಲ್ ಅಧಿಕಾರಿ ಭಾರತಿ ಕಾಂಬಳೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಪಾಟೀಲ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಮಿರ್ಜಿ, ಉಪಾಧ್ಯಕ್ಷ ಪುಟ್ಟಮ್ಮ ಗಸ್ತಿ ಇತರರು ಮೇವು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net