ಬಸ್ ಸೌಲಭ್ಯಕ್ಕಾಗಿ ಆಗ್ರಹ

22BELAGVI1
Published on

ಮಲ್ಲೂರ: ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರ ಬೈಲಹೊಂಗಲ-ಮುನವಳ್ಳಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಮೊದಲು ಸೇವೆ ನೀಡುತ್ತಿದ್ದ ಬಸ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ನಿತ್ಯ ಪ್ರಯಾಣಕ್ಕೆ ಸಮಸ್ಯೆ ಉಂಟಾಗುತ್ತಿದೆ. ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಬೈಲಹೊಂಗಲ ಘಟಕದ ಸಾರಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಕಾಲಕ್ಕೆ ಬಸ್ ವ್ಯವಸ್ಥೆ ಒದಗಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಈ ವೇಳೆ ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಬಂದ ಘಟಕ ವ್ಯವಸ್ಥಾಪಕರು, ಸ್ಥಗಿತಗೊಳಿಸಿದ್ದ ಬಸ್ ಪುನಾರಂಭಿಸುವುದರ ಜತೆಗೆ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖಂಡರಾದ ಬಸನಗೌಡ ಪಾಟೀಲ, ರುದ್ರಗೌಡ ಪಾಟೀಲ, ಸೋಮಪ್ಪ ಬುಡಶೆಟ್ಟಿ, ಚಿದಾನಂದ ಪಾಟೀಲ, ಈರಣ್ಣ ನಾಗನೂರ ಚೇತನ ಕಿತ್ತೂರ, ಈರಣ್ಣ ಪ್ರಭುನವರ, ಮಹೇಶ ದೇಗಾವಿ, ನಿಂಗಪ್ಪ ಅರವಳ್ಳಿ, ಈಶ್ವರ ಮದಲಭಾವಿ, ಮುತ್ತು ಪತ್ರಿಮಠ, ಪ್ರವೀಣ ಅರವಳ್ಳಿ, ಸಚಿನ ಬೇವೂರ, ಉಮೇಶ ಕಮತಗಿ, ಮುತ್ತು ಪ್ರಭುನವರ, ಈರಣ್ಣ ಮೇಟಿ, ಮದನ ಮುರಗೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net