ಮನಸಿನ ಸಮತೋಲನಕ್ಕೆ ಧಾರ್ಮಿಕತೆ ಅವಶ್ಯ

4TLR1
Published on

ತಲ್ಲೂರ: ಮನುಷ್ಯನ ಮನಸ್ಥಿತಿ ಸಮತೋಲನಕ್ಕೆ ಧಾರ್ಮಿಕ ಕಾರ್ಯ ಅಗತ್ಯ. ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಮಾಜವನ್ನು ಜಾಗೃತಗೊಳಿಸುತ್ತಿದೆ ಎಂದು ಇಂಚಲ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.

ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಗಳ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತೊರಗಲ್ಲಮಠದ ದೀಪಕ ಸ್ವಾಮಿ, ಗ್ರಾಪಂ ಅಧ್ಯೆ ಕವಿತಾ ಬಾಲರೆಡ್ಡಿ, ಸಾಯಿ ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಎ.ವಿ.ಇಂಗಳೆ, ಶಾಂತವ್ವ ಉಪ್ಪಾರ, ಮೊದೀನಸಾಬ ಮುಲ್ಲಾ, ಯೋಜನಾಧಿಕಾರಿ ಸತೀಶ ಡಿ, ಮೇಲ್ವಿಚಾರಕ ನಾಗರಾಜ ಎನ್​. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net