ಅಂಬಡಗಟ್ಟಿ ಪಿಎಚ್‌ಸಿಗೆ ಉದ್ಘಾಟನೆ ಭಾಗ್ಯ

19KITTUR1C
Published on

ಚನ್ನಮ್ಮನ ಕಿತ್ತೂರು: ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ 1.82 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ೆ 11ರಂದು ‘ಪೆಗ್ ಬಾರ್ ಆದ ಅಂಬಡಗಟ್ಟಿ ಪಿಎಚ್‌ಸಿ’ ಶೀರ್ಷಿಕೆಯಡಿ ವಿಸ್ತೃ ವರದಿ ಪ್ರಕಟಿಸಿ ಗಮನ ಸೆಳೆದ ಪರಿಣಾಮ ತಾಲೂಕಾಡಳಿತ ಎಚ್ಚೆತ್ತು ಬುಧವಾರ ಉದ್ಘಾಟನೆ ಭಾಗ್ಯ ಕರುಣಿಸಿದೆ.

ಇದರ ಜತೆಗೆ ಹೊಳಿಹೊಸುರ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವೂ ಉದ್ಘಾಟನೆಯಾಗಿ ಬಡ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಮುಕ್ತವಾದವು. ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ನಾವು ದೇವಸ್ಥಾನಗಳಿಗೆ ಹೋಗುತ್ತೇವೆ.

ಅಲ್ಲಿ ದೇವರು ಮಾನಸಿಕ ನೆಮ್ಮದಿ ನೀಡುತ್ತಾನೆ. ಆದರೆ ನಿಜವಾದ ದೇವಸ್ಥಾನ ನಮ್ಮ ಆಸ್ಪತ್ರೆ. ನಮ್ಮ ಆರೋಗ್ಯ ಹಾಳಾದಾಗ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವಾಗ ನಮ್ಮ ರಕ್ಷಣೆ ಮಾಡುವುದೇ ಆಸ್ಪತ್ರೆ. ಹಾಗಾಗಿ ಆಸ್ಪತ್ರೆಯನ್ನು ದೇವಸ್ಥಾನದ ರೀತಿ ಕಾಣಬೇಕು. ಸರ್ಕಾರದ ಆಸ್ಪತ್ರೆ ಬಗ್ಗೆೆ ಕಾಳಜಿ ಇರಬೇಕು. ಅಂದಾಗ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಐ.ಪಿ. ಗಡಾದ್, ತಾಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ, ತಾಪಂ ಇಒ ಕಿರಣ ೋರ್ಪಡೆ, ಪ್ರಾಥಮಿಕ ಆರೋಗ್ಯ ಅಧಿಕಾರಿ ಮಹಾಂತೇಶ ಹಿರೇಮಠ, ಗ್ರಾಪಂ ಅಧ್ಯಕ್ಷೆ ದೀಪ ಕೋಟಬಾಗಿ, ಉಪಾಧ್ಯಕ್ಷ ಉಮೇಶ ಲಂಕನವರ, ಗ್ರಾಪಂ ಸರ್ವ ಸದಸ್ಯರು, ಆಶಾ ಕಾರ್ಯಕರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net