

ಸಿಂಧನೂರು: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೌಟ್ಸ್ ಚಳವಳಿ ಪೂರಕವಾಗಿವೆ ಎಂದು ಸ್ಕೌಟ್ಸ್ ಮಾಸ್ಟರ್, ಮುಖ್ಯಶಿಕ್ಷಕ ಶಂಕರದೇವರು ಹಿರೇಮಠ ಹೇಳಿದರು.
ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಯಿಂದ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಿ ಶಿಸ್ತಿನಿಂದ ಜೀವನ ನಡೆಸಲು ಸ್ಕೌಟ್ಸ್ ಚಳವಳಿ ಸಹಾಯಕವಾಗಿದೆ ಎಂದು ತಿಳಿಸಿದರು.
ಸಂಸ್ಥಾಪಕರ ದಿನಾಚರಣೆ ಹಾಗೂ ವಿಶ್ವ ಚಿಂತನಾ ದಿನಾಚರಣೆ ಅಂಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದುಗ್ಗಮ್ಮನಗುಂಡ ಶಾಲೆಯಲ್ಲಿ ಭಾವೈಕ್ಯ ಸಾರುವ ಮಕ್ಕಳಲ್ಲಿ ಐಕ್ಯತೆ ಮೂಡಿಸಲು ಸಹಾಯಕವಾಗುವ ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಶಿಕ್ಷಕ ಪ್ರದೀಪ್ ಕುಮಾರ್, ಪಾಲಕರಾದ ರೇಣುಕಾ, ಹನುಮಮ್ಮ ಇದ್ದರು.