ಸಕಲ ಜೀವರಾಶಿಗಳಿಗೆ ಗಂಗಾದೇವಿ ಆಧಾರ

Sirguppa Ganga
ಸಿರಗುಪ್ಪದಲ್ಲಿ ಗಂಗಾ ಜಯಂತಿ ಅಂಗವಾಗಿ ಗಂಗಾದೇವಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
Published on

ಸಿರಗುಪ್ಪ: ಗಂಗಾಮಾತೆ ಸರ್ವರಿಗೂ ತಾಯಿ ಇದ್ದಂತೆ. ಜೀವಜಲ ನೀಡುತ್ತ ಸಕಲ ಜೀವರಾಶಿಗಳಿಗೆ ಆಧಾರವಾಗಿದ್ದಾಳೆ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲೆಂದು ನಮ್ಮ ಪೂರ್ವಜರು ಕುಲದೇವತೆಯ ಜಯಂತಿ ಆಚರಿಸಿಕೊಂಡು ಬಂದಿದ್ದಾರೆ ಎಂದು ಗಂಗಾಮತಸ್ಥರ ಸಂಘದ ನಗರ ಘಟಕದ ಅಧ್ಯಕ್ಷ ಕಾಪು ಷಣ್ಮುಖ ಹೇಳಿದರು.

ನಗರದ ಗಂಗಾ ನಗರದಲ್ಲಿ ಗಂಗಾಮತಸ್ಥರಿಂದ ಭಾನುವಾರ ಏರ್ಪಡಿಸಿದ್ದ ಗಂಗಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಯಂತಿ ನಿಮಿತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಾಧನೆಗೈದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.

ನಗರಸಭೆ ಸದಸ್ಯ ಆರ್.ನಾಗರಾಜ, ನಗರ ಘಟಕದ ಗೌರವಾಧ್ಯಕ್ಷ ಬಿ.ವೆಂಕೋಬ, ಉಪಾಧ್ಯಕ್ಷರಾದ ಎಸ್.ರಾಘವೇಂದ್ರ, ಬಿ.ಸರ್ದಾರ, ಕಾರ್ಯದರ್ಶಿ ರಾಘು, ಖಜಾಂಚಿ ಲಿಂಗಮಯ್ಯ, ಪ್ರಮುಖರಾದ ಟಿ.ಅಮಾಜಪ್ಪ, ಎಸ್.ಮುದುಕಪ್ಪ, ಆರ್ಚಕ ವೈ.ಶ್ರೀನಿವಾಸ, ಅಡಿವೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net