ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ

10-Athani-01-Web
ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕರೊನಾ ಸೇನಾನಿಗಳಿಗೆ ಕಿಟ್ ವಿತರಿಸಲಾಯಿತು. ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಗಜಾನನ ಮಂಗಸೂಳಿ, ಶಹಜಹಾನ ಡೊಂಗರಗಾಂವ, ಎಸ್.ಕೆ.ಬುಟಾಳಿ ಮತ್ತಿತರರು ಇದ್ದರು.
Published on

ಅಥಣಿ: ಜನರಲ್ಲಿರುವ ಕರೊನಾ ಭಯ ಹೋಗಲಾಡಿಸಲು ಕಾಂಗ್ರೆಸ್‌ನಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ವೀರಕುಮಾರ ಪಾಟೀಲ ಹೇಳಿದ್ದಾರೆ.

ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ, ಕರೊನಾ ಯೋಧರಿಗೆ ತರಬೇತಿ ಶಿಬಿರ ಹಾಗೂ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಜನರಿಗೆ ಅಗತ್ಯ ನೆರವು ನೀಡುವ ಉದ್ದೇಶದಿಂದ ಮತಕ್ಷೇತ್ರದಲ್ಲಿ ಸುಮಾರು 70ಕ್ಕೂ ಹೆಚು ಕರೊನಾ ಸೇನಾನಿಗಳ ಪಡೆಯನ್ನು ನಿರ್ಮಿಸಲಾಗಿದೆ. ಸೇನಾನಿಗಳು ಮತಕ್ಷೇತ್ರದ ಪ್ರತಿ ಮನೆಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಉಸ್ತುವಾರಿ ಸದಾನಂದ ಡಂಗಣ್ಣವರ ಮಾತನಾಡಿ, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯದಿಂದ ಜನ ಕರೊನಾಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇನ್ನೊಂದು ವರ್ಷದಲ್ಲಿ ಪತನ ವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು. ವೈದ್ಯ ಡಾ.ಆಸಿಫ್‌ಅಲಿ ಡೊಂಗರಗಾಂವ ಸೇನಾನಿಗಳಿಗೆ ತರಬೇತಿ ನೀಡಿ ಕಿಟ್ ವಿತರಿಸಿದರು. ಕಾಂತಾ ನಾಯಕ, ಶಹಜಹಾನ ಡೊಂಗರಗಾಂವ, ಬ್ಲಾಕ್ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ತೇಜಸ್ವಿನಿ, ಎಸ್.ಕೆ.ಬುಟಾಳಿ, ಸತ್ಯಪ್ಪ ಬಾಗೆಣ್ಣವರ, ಬಸವರಾಜ ಬುಟಾಳೆ, ದಿಗ್ವಿಜಯ ಪವಾರದೇಸಾಯಿ, ಧರೆಪ್ಪ ಠಕ್ಕಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net