ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯ

2
ನಿಪ್ಪಾಣಿಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಮಹಾದೇವಿ ನಾಯಿಕ, ಪ್ರಾಣಲಿಂಗ ಸ್ವಾಮೀಜಿ, ಪ್ರವೀಣ ಕಾರಂಡೆ, ಸೋನಲ್ ಕೊಠಡಿಯಾ ಇತರರಿದ್ದರು.
Published on

ನಿಪ್ಪಾಣಿ: ಸಾಧನೆ ಮಾಡಲು ಶಿಕ್ಷಕರ ಮಾರ್ಗದರ್ಶನ ಅವಶ್ಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಶಿವ ಛತ್ರಪತಿ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ನಿಧಿಯಡಿ ಸುಮಾರು 300ಕ್ಕೂ ಅಧಿಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಗುರುಭವನದ ನಿರ್ಮಾಣಕ್ಕಾಗಿ ಈ ಮೊದಲು 10 ಲಕ್ಷ ರೂ. ಅನುದಾನ ಕಲ್ಪಿಸಲಾಗಿತ್ತು. ಈಗ ಮತ್ತೆ 10 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಗುರುಭವನದ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ತಹಸೀಲ್ದಾರ್ ಪ್ರವೀಣ ಕಾರಂಡೆ ಮಾತನಾಡಿ, ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು.

ನಿವೃತ್ತ ಶಿಕ್ಷಕರು, ಆದರ್ಶ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ನಗರಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸದಸ್ಯ ಜಯವಂತ ಬಾಟಲೆ, ಗೀತಾ ಪಾಟೀಲ, ಕಾವೇರಿ ಮಿರ್ಜೆ, ಅರುಣಾ ಮುದಕುಡೆ, ಸುಜಾತಾ ಕದಮ, ಮಹಾದೇವ ಗೋಕಾರ, ತೇಜಸ್ವಿ ಬೆಳಗಲಿ, ಯಲ್ಲಪ್ಪ ಹಂಡಿ, ರಾಜೇಶ ಕೊಠಡಿಯಾ, ಸದಾಶಿವ ವಡ್ಡರ, ಸುರೇಶ ಕಾಂಬಳೆ, ಭಾಸ್ಕರ ಸ್ವಾಮಿ, ಸುನೀಲ ಜನವಾಡೆ, ಬಾಬುರಾವ ಮಲಾಬಾದೆ, ಸದಾಶಿವ ಯಲ್ಲಟ್ಟಿ ಇತರರು ಇದ್ದರು. ಬಿಇಒ ಮಹಾದೇವಿ ನಾಯಿಕ, ಲಕ್ಷ್ಮಣ ಕೋಣೆ ಮತ್ತು ಜಿ.ಬಿ.ಗಲಬಿ ನಿರೂಪಿಸಿದರು. ರಾಜಗೌಡಾ ಕಾಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net