ಸಾಧನೆಗೆ ಬಡತನ, ಕಷ್ಟ ಪ್ರೇರಣೆ

6
ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಡಾ.ಎಸ್.ಎಸ್.ಎಂಟೆತ್ತಿನವರ ಮಾತನಾಡಿದರು. ಯತೀಶ್ವರಾನಂದ ಸ್ವಾಮೀಜಿ, ಪ್ರಾ. ಡಾ.ಎಸ್.ಎ.ಕರ್ಕಿ, ಡಾ.ಎಸ್.ಪಿ.ತಳವಾರ, ಪ್ರೊ.ಬಿ.ಎ.ಪಾಟೀಲ, ಡಾ.ಡಿ.ಡಿ. ನಗರಕರ ಇತರರು ಇದ್ದರು.
Published on

ಕಾಗವಾಡ: ಶಿಕ್ಷಣ ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಹುಲಿಯಂತೆ ಗರ್ಜಿಸಲೇಬೇಕು. ನೋವು, ಬಡತನ ಮತ್ತು ಕಷ್ಟಗಳು ಏನಾದರೂ ಸಾಧಿಸಲು ಪ್ರಚೋದಿಸುತ್ತವೆ ಎಂದು ಸಾಹಿತಿ ಡಾ.ಎಸ್.ಎಸ್.ಎಂಟೆತ್ತಿನವರ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ 2023-24ನೇ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘವನ್ನು ಈಚಗೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಎ. ಕರ್ಕಿ ಮಾತನಾಡಿ, ಶಿಕ್ಷಣ ಹರಿಯುವ ನೀರು. ಅದರೊಂದಿಗೆ ನೈತಿಕತೆ ಅತ್ಯವಶ್ಯ. ಉತ್ತಮ ಭವಿಷ್ಯಕ್ಕಾಗಿ ಕಲೆ, ಕೌಶಲ ಪ್ರದರ್ಶಿಸಿ, ಇತರರಿಗೆ ಮಾದರಿಯಾಗಬೇಕು ಎಂದರು.

ಶ್ರೀ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಕಾರ್ಯಾಧ್ಯಕ್ಷ ಡಾ.ಎಸ್.ಪಿ. ತಳವಾರ ಮಾತನಾಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಎ. ಪಾಟೀಲ, ಉಪ ಪ್ರಾಚಾರ್ಯ ಡಾ.ಡಿ.ಡಿ.ನಗರಕರ, ಪ್ರೊ. ಜೆ.ಕೆ. ಪಾಟೀಲ, ಪ್ರೊ.ಎಸ್.ಎಸ್. ಫಡತರೆ, ಪ್ರೊ.ಎಸ್.ಡಿ. ಬಿರಾದಾರ, ಪ್ರೊ.ಬಿ.ಡಿ. ಧಾಮಣ್ಣವರ, ವಿದ್ಯಾರ್ಥಿಗಳಾದ ಅಭಿಷೇಕ ತಳವಾರ, ಸಾಧಿಕಾ ಚಿಕ್ಕನರಸೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net